ಮನೆಯಲ್ಲಿ ಯಾರಿಗಾದರೂ ಸಣ್ಣ ಪುಟ್ಟ ಶೀತ ಬಂದರೆ ಏನು ಮಾಡುತ್ತಾರೆ. ಗಂಭೀರವಾಗಿದ್ದರೆ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಇಲ್ಲವಾದರೆ ಮನೆಯಲ್ಲೇ ಏನಾದರೂ ಮದ್ದು ಮಾಡುತ್ತಾರೆ. ಅದರಲ್ಲಿ ಆವಿ ತೆಗೆದುಕೊಳ್ಳುವುದು ಅಥವಾ ಹಬೆ ತೆಗೆದುಕೊಳ್ಳುವುದೂ ಒಂದು. ಸಾಮಾನ್ಯವಾಗಿ ಕಟ್ಟಿದ ಮೂಗನ್ನು ಸರಿ ಮಾಡಲು ಹಬೆ ಬಳಸುತ್ತಾರೆ. ಬಿಸಿ ನೀರಿನ ಆವಿ ತೆಗೆದುಕೊಳ್ಳಬಹುದು ಅಥವಾ ಇದಕ್ಕೆ ವಿಕ್ಸ್ ಅಥವಾ ನೀಲಗಿರಿ ಎಣ್ಣೆ ಹಾಕಿಯೂ ಆವಿ ತೆಗೆದುಕೊಂಡರೆ ಬೇಗ ಆರಾಮು ಸಿಗುತ್ತದೆ.
ಯಾವ ರೀತಿ ಆವಿ ತೆಗೆದುಕೊಳ್ಳಬಹುದು?
- ಟ್ರಡಿಶನಲ್: ಇದು ನಾವು ನೀವೆಲ್ಲ ಮನೆಯಲ್ಲಿ ಮಾಡುವ ರೀತಿ. ಪಾತ್ರೆಗೆ ನೀರು ಹಾಕಿ ಕುದಿಸಿ, ಅದಕ್ಕೆ ಬೇಕಾದ್ದು ಹಾಕಿ, ತಲೆ ಮೇಲೆ ಟವಲ್ ಹಾಕಿಕೊಂಡು ಆವಿ ತೆಗೆದುಕೊಳ್ಳುವುದು.
- ಶವರ್: ಬಿಸಿ ಬಿಸಿ ನೀರಿನ ಶವರ್ ಆನ್ ಮಾಡಿ ಅದರ ಹಬೆಯನ್ನು ತೆಗೆದುಕೊಳ್ಳುವುದು. ಇದರಲ್ಲಿ ಏನನ್ನೂ ಮಿಶ್ರಣ ಮಾಡಲು ಆಗುವುದಿಲ್ಲ. ಬರೀ ಬಿಸಿನೀರಿನ ಹಬೆ ಬೇಕಾದರೆ ಈ ರೀತಿಯೂ ಮಾಡಬಹುದು.
- ಪರ್ಸನಲ್ ಇನ್ಹೇಲರ್ಸ್: ಕೈಯಲ್ಲಿಯೇ ಹಿಡಿದುಕೊಂಡು ಇನ್ಹೇಲ್ ಮಾಡಬಹುದಾದಂತಹ ಪರ್ಸನಲ್ ಇನ್ಹೇಲರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ಬೇಕಾದ್ದನ್ನು ಹಾಕಿಯೂ ಸ್ಟೀಮ್ ತೆಗೆದುಕೊಳ್ಳಬಹುದು.
ಸ್ಟೀಮ್ ತೆಗೆದುಕೊಳ್ಳುವುದರಿಂದ ಯಾವ ರೋಗಕ್ಕೆ ಉಪಕಾರಿ?
- ಶೀತ
- ಫ್ಲೂ
- ಸೈನಸ್ ಇನ್ಫೆಕ್ಷನ್
- ಬ್ರೊಂಕೈಟಿಸ್
- ನೇಸಲ್ ಅಲರ್ಜಿ
- ತಲೆನೋವು
- ಕಟ್ಟಿದ ಮೂಗು
- ಗಂಟಲಲ್ಲಿ ಕಿರಿಕಿರಿ
- ಕಫ
ಆವಿ ತೆಗೆದುಕೊಳ್ಳುವುದರಿಂದ ಏನು ಲಾಭ?
- ಇದು ನೂರಕ್ಕೆ ನೂರು ನೈಸರ್ಗಿಕ: ಏನಾದರೂ ಆಗಿರಲಿ ಸ್ಟೀಮ್ ನ್ಯಾಚುರಲ್ ಥೆರಪಿ. ಇದು ನೂರಕ್ಕೆ ನೂರರಷ್ಟು ನ್ಯಾಚುರಲ್. ಇದರಲ್ಲಿ ಯಾವುದೇ ಕೆಮಿಕಲ್ ಇಲ್ಲ. ಏನೋ ಕೆಮಿಕಲ್ ನಮ್ಮ ದೇಹಕ್ಕೆ ಹೋಗುತ್ತಿದೆ ಎನ್ನುವ ಭಾವನೆಯೂ ಇಲ್ಲ.
- ಹೆಚ್ಚು ದುಡ್ಡೂ ಬೇಕಾಗಿಲ್ಲ: ಸ್ಟೀಮ್ ತೆಗೆದುಕೊಳ್ಳಲು ಹೊರಗೆ ಹೋಗಬೇಕು ಎಂದೇನಿಲ್ಲ. ಇನ್ನು ನೀರಿಗೆ ಹಾಕುವ ವಸ್ತುಗಳನ್ನು ಕೊಳ್ಳಬೇಕಾದರೆ ಕೊಳ್ಳಬಹುದು. ಇಲ್ಲಾ ಎಂದರೆ ಬರೀ ನೀರಿನ ಹಬೆ ಕೂಡ ಸಾಕು. ಇದೆಲ್ಲವೂ ಮನೆಯಲ್ಲಿಯೇ ಸಿಗಲಿದೆ.
- 3500 ವರ್ಷ ಹಳೆಯ ಪದ್ಧತಿ: ಈ ಟೆಕ್ನಿಕ್ ಇತ್ತೀಚಿನದಲ್ಲ. ಇದು ೩೫೦೦ ವರ್ಷ ಹಳೆಯದು. ಇಜಿಪ್ಷಿಯನ್ನರು ಬಾತ್ ಹೌಸಸ್ ಎನ್ನುವ ಕಾನ್ಸೆಪ್ಟ್ನ್ನು ಆಗಲೇ ಪರಿಚಯಿಸಿದ್ದರು.
ಇದರಿಂದಾಗುವ ಲಾಭಗಳೇನು?
- ಡ್ರೈ, ಇರಿಟೇಟ್ ಆಗಿರುವ ನೇಸಲ್ ಹಾಗೂ ಥ್ರೋಟ್ ಪ್ಯಾಸೇಜ್ಗಳನ್ನು ಮಾಸ್ಚರೈಸ್ ಮಾಡುತ್ತದೆ.
- ಕಟ್ಟಿದ ಮೂಗು, ಶೀತ ಕರಗಿಸುತ್ತದೆ.
- ಥ್ರೋಟ್ ಮಸಲ್ಗಳನ್ನು ರಿಲ್ಯಾಕ್ಸ್ ಮಾಡಿ, ಕೆಮ್ಮು ಬಾರದಂತೆ ತಡೆಗಟ್ಟುತ್ತದೆ.