ಮೀನುಪ್ರಿಯರಿಗೆ ಫಿಶ್ ಫ್ರೈ ಮಾಡೋದು ತುಂಬಾನೇ ಈಸಿ. ಆದರೆ ತಿನ್ನೋಕೆ ಮಾತ್ರ ಕಷ್ಟ. ಮೀನು ಫ್ರೈ ಮಾಡೋದಕ್ಕೆ ಹೆಚ್ಚು ಸಮಯ,ಕೆಲಸ ಹಿಡಿಯುತ್ತದೆ ಅಂತ ಹಲವರು ಮನೆಯಲ್ಲಿ ಮಾಡೋದೆ ಇಲ್ಲ. ಹೊರಗಿನಿಂದಲೇ ತಂದು ತಿನ್ನುತ್ತಾರೆ ಅಥವಾ ಹೊರಗೆ ಹೋಗಿ ತಿನ್ನುತ್ತಾರೆ. ಈಸಿಯಾಗಿ ಮೀನು ಫ್ರೈ ಮಾಡೋದು ಹೇಗೆ ಗೊತ್ತಾ? ಈಸಿ ರೆಸಿಪಿ ಇಲ್ಲಿದೆ..
ಬೇಕಾಗಿರುವ ಸಾಮಾಗ್ರಿಗಳು
- ಮೀನು
- ಉಪ್ಪು
- ಅರಿಶಿಣ
- ಖಾರದ ಪುಡಿ
- ಹುಣಸೆ ಹುಳಿ
- ಶುಂಠಿ ಬೆಳ್ಳುಳ್ಳಿ ಪೆಸ್ಟ್
- ಹಸಿಮೆಣಸು
- ಕರಿಬೇವು
ಮಾಡುವ ವಿಧಾನ - ಮೊದಲು ಮೀನಿಗೆ ಉಪ್ಪು,ಖಾರ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಎಲ್ಲವನ್ನು ಹಾಕಿ ಮೀನಿಗೆ ಹಚ್ಚಿ ಮ್ಯಾರಿನೇಟ್ ಮಾಡಿ.
- ಈಗ ತವಾಗೆ ಎಣ್ಣೆ ಹಾಕಿ, ಹಸಿಮೆಣಸು ಹಾಗೂ ಕರಿಬೇವು ಹಾಕಿ. ಈಗ ಮೀನನ್ನು ಇದರಲ್ಲಿ ಫ್ರೈ ಮಾಡಿ.
ನಿಂಬೆ ರಸ ಹಾಕಿಕೊಂಡು ತಿಂದರೆ ಮೀನು ಫ್ರೈ ರೆಡಿ..