ಮನೆಯಲ್ಲಿ ಎಲ್ಲೆಂದರಲ್ಲಿ ಇರುವೆಗಳು. ಅಡುಗೆ ಮನೆಯಲ್ಲಂತೂ ಅವರದ್ದೇ ಸಾಮ್ರಾಜ್ಯ ಇನ್ನು ಕಬೋರ್ಡ್ ಒಳಗೆ, ಬಟ್ಟೆಗಳಲ್ಲಿ ಅಡಗಿ ಕೂತು ಹಿಂಸೆ ಕೊಡುತ್ತವೆ. ಇರುವೆಗಳನ್ನು ಸಾಯಿಸದೇ ಮನೆಯಿಂದ ಓಡಿಸಲು ಸರಳ ಉಪಾಯಗಳಿವೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಇರುವೆಗಳನ್ನು ಹೇಗೆ ಓಡಿಸುವುದು ನೋಡಿ..
- ಪುದೀನಾ ಎಲೆಗಳು: ಮನೆಯ ಸುತ್ತಮುತ್ತ ಪುದೀನಾ ಗಿಡಗಳನ್ನು ಹಾಕಿ. ಇದನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಅಲ್ಲದೇ ಇವು ಇರುವೆಗಳನ್ನು ಓಡಿಸಲು ಸಹಾಯ ಮಾಡುತ್ತವೆ. ಇರುವೆಗಳಿಗೆ ಇದರ ವಾಸನೆ ಇಷ್ಟವಾಗುವುದಿಲ್ಲ. ಅವು ತಾನಾಗೇ ಓಡಿ ಹೋಗುತ್ತವೆ.
- ವಿನೇಗರ್: ಇರುವೆಗಳನ್ನು ಕೊಲ್ಲಲು ಅರ್ಧ ವಿನೇಗರ್ ಅರ್ಧ ನೀರು ಹಾಕಿ ಇರುವೆಗಳ ಮೇಲೆ ಸ್ಪ್ರೇ ಮಾಡಿ. ನಂತರ ಕಿಟಕಿ ಬಾಗಿಲು, ಯಾವ ಜಾಗದಿಂದ ಇರುವ ಬರುತ್ತದೋ ಅಲ್ಲೆಲ್ಲ ಸ್ಪ್ರೇ ಮಾಡಿ ಇರುವೆ ಓಡಿಸಿ.
- ನಿಂಬೆ ರಸ: ಒಂದು ಸ್ಪೂನ್ ನಿಂಬೆ ರಸಕ್ಕೆ ಮೂರು ಸ್ಪೂನ್ ನೀರು ಹಾಕಿ ಇರುವೆಗಳ ಮೇಲೆ ಸ್ಪ್ರೇ ಮಾಡಿ, ಅವನ್ನು ಓಡಿಸಿ.
- ಚಕ್ಕೆ: ಚಕ್ಕೆಯನ್ನು ಬಳಸಿ ಇರುವೆ ಕೊಲ್ಲಬಹುದು. ಚಕ್ಕೆ ಪುಡಿ ಮಾಡಿ ಇದನ್ನು ಇರುವೆ ಬರುವ ಜಾಗಗಳಿಗೆ ಉದುರಿಸಿ. ಇರುವೆಗಳಿಗೆ ಚಕ್ಕೆ ವಾಸನೆ ಆಗುವುದಿಲ್ಲ. ಅದನ್ನು ಮೂಸಿದ ನಂತರ ಉಸಿರಾಡಲಾರದೇ ಸತ್ತುಹೋಗುತ್ತವೆ.
- ಕಾಳು ಮೆಣಸು: ಯಾವ ಜಾಗದಿಂದ ಇರುವೆ ಒಳ ಬರುತ್ತಿದೆ ಎಂದು ನೋಡಿ ಆ ಜಾಗಕ್ಕೆ ಕಾಳು ಮೆಣಸಿನ ಪುಡಿ ಹಾಕಿ. ಇದರಿಂದ ಇರುವೆಗಳು ಸಾಯುವುದಿಲ್ಲ. ಆದರೆ ಮತ್ತೆಂದೂ ವಾಪಾಸ್ ಬರುವುದಿಲ್ಲ.