Sunday, August 14, 2022

Latest Posts

ಮನೆಯಲ್ಲಿ ಗಾರ್ಡನ್ ಮಾಡಲು ಜಾಗ ಇಲ್ಲವಾ? ಹಾಗಾದರೆ ನೀವು Terrace garden ಮಾಡಬಹುದು.. ಹೇಗೆ ಅಂತಿರಾ? ಓದಿ..

ಬಾಲ್ಕನಿಯಲ್ಲಿ ತೋಟ ಮಾಡಿಕೊಳ್ಳುವುದು ಈಗಿನ ಟ್ರೆಂಡ್. ಮನೆ ಮುಂದೆ ಜಾಗ ಇಲ್ಲ, ನಮ್ಮದು ಬಾಡಿಗೆ ಮನೆ, ನಾವು ಮೊದಲನೆ ಫ್ಲೋರ್‌ನಲ್ಲಿ ಇದ್ದೇವೆ ಹೀಗೆ ಈ ರೀತಿ ಯೋಚಿಸುವವರು ತಾರಸಿ ತೋಟ ಮಾಡಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಕೆಲಸ ಹಿಡಿಯಬಹುದು. ಆದರೆ ತೋಟದಷ್ಟೇ ಖುಷಿ ನೀಡುತ್ತದೆ. ಹಾಗಾದರೆ ತಾರಸಿ ತೋಟ ಮಾಡುವುದು ಹೇಗೆ? ಅದಕ್ಕೆ ಏನು ಬೇಕಾಗುತ್ತದೆ? ಅದರಿಂದ ಆಗುವ ಉಪಯೋಗವೇನು ನೋಡೋಣ ಬನ್ನಿ..
ಬಿಸಿಲಿರುವ ಕಡೆ ಇರಲಿ ನಿಮ್ಮ ತೋಟ:  ನಿಂಬೆಹಣ್ಣು,ಕಿತ್ತಳೆ ಅಥವಾ ಸಿಟ್ರಸ್ ಅಂಶ ಹೊಂದಿದ ಗಿಡಗಳಿಗೆ ಬಿಸಿಲು ಬೇಕೇ ಬೇಕು. ಅದಕ್ಕೆ ಮಾತ್ರವಲ್ಲ ಎಲ್ಲ ಗಿಡಗಳಿಗೂ ಬಿಸಿಲು ಬೇಕು. ಬಿಸಿಲು ಚೆನ್ನಾಗಿರುವ ಜಾಗವನ್ನು ನಿಮ್ಮ ತೋಟ ಮಾಡಿಕೊಳ್ಳಲು ಆರಿಸಿ.
ಮೈಕ್ರೋ ಪಾರ್ಕ್ ಮಾಡಿಕೊಳ್ಳಬಹುದು: ಸ್ವಲ್ಪ ಜಾಗವಷ್ಟನ್ನೇ ಆರಿಸಿಕೊಂಡು ಅಲ್ಲಿ ನಿಮಗೆ ಬೇಕಾದ ಗಿಡಗಳನ್ನು ಹಾಕಿ,ಗ್ರಾಸ್ ಮಾಡಿಕೊಂಡು ಪಾರ್ಕ್ ರೀತಿ ಅಲಂಕಾರ ಮಾಡಿಕೊಳ್ಳಬಹುದು. ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.
ವರ್ಟಿಕಲ್ ಗಾರ್ಡನ್: ಹೆಚ್ಚು ಗಿಡ ಬೆಳೆಸಬೇಕು ಆದರೆ ಕಡಿಮೆ ಜಾಗ ಇದೆ ಎನ್ನುವವರು ಇದನ್ನು ಟ್ರೈ ಮಾಡಬಹುದು. ಪಾಟ್‌ಗಳನ್ನು ಉದ್ದುದ್ದ ಹ್ಯಾಂಗ್ ಮಾಡಿ ಅದರಲ್ಲಿ ಚಂದದ ಹೂವುಗಳ ಗಿಡ ಹಾಕಬಹುದು. ಇದು ನೋಡಲು ಸುಂದರವಾಗಿ ಕಾಣುತ್ತದೆ ಅಲ್ಲದೆ ಜಾಗ ಉಳಿಸುತ್ತದೆ. ಮನೆಯೊಳಗೆ ಮನೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲಿಯೂ ಈ ಕೆಲಸ ಮಾಡಬಹುದು.
ಮಾರ್ಡ್‌ನ್ ವಾತಾವರಣ ಸೃಷ್ಟಿ: ಮಾರ್ಡ್‌ನ್ ಅವತಾರದಲ್ಲಿ ಗಿಡಗಳು, ತೋಟ ಅದರ ಪಕ್ಕ ಒಂದು ಟೇಬಲ್ ಸೋಫಾ ಹಾಕಿ ಬಿಡುವಿನ ಸಮಯ ಅಲ್ಲಿ ಕಳೆಯಬಹುದು. ಇದು ನಿಮ್ಮ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತದೆ. ಮಳೆ ಸಮಯದಲ್ಲಿ ಇಲ್ಲಿ ಕುಳಿತು ಕಾಫಿ ಕುಡಿಯುವುದನ್ನು ಊಹಿಸಿ ನೋಡಿ ಎಷ್ಟು ಚೆನ್ನಾಗಿರುತ್ತದೆ?
ಕಬೋರ್ಡ್ ರೀತಿ ಗಿಡ ಬೆಳೆಸಿ: ಮನೆಯಲ್ಲಿ ಪುಸ್ತಕ ಇಡುವ ರ‍್ಯಾಕ್ ರೀತಿ ಮನೆಯ ಮೇಲೆ ಮಾಡಿಕೊಂಡು, ಅದರಲ್ಲಿ ಕೊತ್ತಂಬರಿ,ಪುದೀನ,ಸ್ಟ್ರಿಂಗ್ ಆನಿಯನ್, ಬಸಳೆ, ಆಲೋವೆರಾ ಹೀಗೆ ಗಿಡಗಳನ್ನು ಪಕ್ಕ ಪಕ್ಕದಲ್ಲಿ ಬೆಳೆಸಬಹುದು. ಇವು ಅಡುಗೆ ಮನೆಗೂ ಸಹಾಯ ನೋಡಲೂ ಚಂದ.
ಬರೀ ಹೂವಿನ ಗಿಡಗಳೂ ಅಂದ: ಅಂದ ಹೆಚ್ಚಿಸಲೆಂದೇ ಇರುವ ಹೂವಿನ ಗಿಡಗಳನ್ನು ಮಾತ್ರ ಬೆಳೆಯಬಹುದು. ರೂಮ್‌ನಿಂದ ಬಾಗಿಲು ಇರುವ ಮನೆಗಳಿಗೆ ಇದು ಸೂಕ್ತ. ಇಲ್ಲಿ ಹೊರಗಿನಿಂದಲೂ ಇದನ್ನು ನೋಡಲು ಸುಂದರವಾಗಿ ಕಾಣುತ್ತದೆ. ಒಳಗಿನಿಂದಲೂ ಚೆನ್ನಾಗಿ ಕಾಣುತ್ತದೆ. ಬಾಲ್ಕನಿಯಲ್ಲಿ ಹೂವಿನ ಗಿಡಗಳು ತುಂಬಿದ್ದರೆ ಅದನ್ನು ನೋಡುವುದೇ ಒಂದು ಖುಷಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss