ಮನೆಯಲ್ಲಿ ಯಾವಾಗಲೂ ಜಗಳ, ಯಾವುದಾದರೂ ಒಂದು ವಿಷಯಕ್ಕೆ ಮನಸ್ತಾಪ ಇದ್ದೇ ಇರುತ್ತದೆ. ಆಗೆಲ್ಲಾ ನಮ್ಮ ಕುಟುಂಬ ಅಷ್ಟೇ ಹೀಗೇಕೆ ಎನಿಸುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲ ಎನ್ನುವ ಪದ ಬಳಕೆಗೆ ಬಂದೇ ಬರುತ್ತದೆ. ಮನೆಯಲ್ಲಿ ಹೇಗಿದ್ದರೆ ಎಲ್ಲರೂ ಶಾಂತಿಯಿಂದ ಇರಬಹುದು. ನೆಮ್ಮದಿಯಿಂದ ಬದುಕುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ ನೋಡಿ…
- ಎಲ್ಲ ಮನೆಯಲ್ಲೂ ಜಗಳ ಇದ್ದದ್ದೇ!: ನಿಮ್ಮ ನೆಯಲ್ಲಿ ಮಾತ್ರ ಜಗಳ ಆಗುತ್ತದೆ ಎನ್ನುವ ಭಾವನೆ ಬೇಡ. ಪ್ರತಿ ಮನೆಯಲ್ಲು ಜಗಳ ಮಾಮೂಲಿ ಎನ್ನುವುದನ್ನು ಒಪ್ಪಿಕೊಳ್ಳಿ. ಎಲ್ಲರಿಗೂ ಸಮಸ್ಯೆ ಇದ್ದೇ ಇರುತ್ತದೆ. ಹುಟ್ಟಿನಿಂದ ಬೆಳೆದ ಫ್ಯಾಮಿಲಿ ಜೊತೆಗೆ ಜಗಳ ಆಗುತ್ತದೆ. ಇನ್ನು ಹೊಸತಾಗಿ ಕಟ್ಟಿಕೊಂಡ ಜೀವನದಲ್ಲಿ ಜಗಳ ಆಗುವುದಿಲ್ಲವಾ?
- ಈ ಪದಗಳನ್ನು ಬಳಸಬೇಡಿ: ಯಾವತ್ತೂ ಮಾಡುವುದಿಲ್ಲ, ಯಾವಾಗಲೂ ಮಾಡಿಲ್ಲ, ಯಾವಾಗಲೂ ಮಾಡುತ್ತೀಯ ಇಂಥ ಪದಗಳ ಬಳಕೆ ನಿಲ್ಲಸಿ. ನೀನು ಯಾವತ್ತೂ ಬದಲಾಗುವುದಿಲ್ಲ, ಯಾವಾಗಲೂ ನನಗಿಷ್ಟದ ಕೆಲಸ ಮಾಡುವುದಿಲ್ಲ, ಎಷ್ಟು ಬಾರಿ ಹೇಳಿದರೂ ಇದೇ ರೀತಿ ಮಾಡುತ್ತೀಯ ಇಂಥದನ್ನು ನಿಲ್ಲಿಸಿ.
- ಮನುಷ್ಯರೆಲ್ಲ ಕೆಟ್ಟವರಲ್ಲ: ಕೆಲವೊಮ್ಮೆ ಸಮಯ ಸಂದರ್ಭ, ಅವರ ಬಿಹೇವಿಯರ್ ವಿಚಿತ್ರವಾಗಿರಬಹುದು. ಆದರೆ ಬೇಸಿಕ್ ಅವರು ಒಳ್ಳೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆಗಾಗ ಎಲ್ಲರೂ ಸಿಟ್ಟು ಬಂದು ಏನೇನೋ ಮಾತನಾಡುತ್ತಾರೆ. ಆದರೆ ಅದು ಆ ಕ್ಷಣಕ್ಕಷ್ಟೆ. ಆ ವ್ಯಕ್ತಿಯ ಒಳ್ಳೆ ಗುಣಗಳನ್ನು ಮಾತ್ರ ನೆನಪಿಟ್ಟುಕೊಂಡು, ಅದನ್ನು ಎನ್ಕರೇಜ್ ಮಾಡಿ.
- ರೂಲ್ಸ್ ಇರಲಿ: ಹೇಗೆ ಬೇಕೋ ಃಆಗಿರಬೇಡಿ. ರೂಲ್ಸ್ ಮಾಡಿ. ಮಕ್ಕಳು ಇಷ್ಟು ಸಮಯ ಓದಬೇಕು, ಇಷ್ಟು ಸಮಯದೊಳಗೆ ಮನೆಗೆ ಬರಬೇಕು. ಕುಡಿತ ಸಿಗರೇಟ್ ಮಾಡುವಂತಿಲ್ಲ. ಹೀಗೆ ಕೆಲವೊಂದು ಫ್ಲೆಕ್ಸಿಬಲ್ ರೂಲ್ಸ್ ಇರಲಿ. ಅವನ್ನು ಆಗಾಗ ಬದಲಾಯಿಸುತ್ತಿರಿ.
- ಸಮಸ್ಯೆಗೆ ಪರಿಹಾರ: ಮಕ್ಕಳಿಗೆ ಸಮಸ್ಯೆ ಹೇಳಬಾರದು ಎಲ್ಲಾ ನಾವೇ ಪರಿಹಾರ ಕಂಡುಹಿಡಿಯಬೇಕು ಎಂದೇನಿಲ್ಲ. ಅವರನ್ನೂ ಸೇರಿಸಿ. ಇನ್ನು ಸಣ್ಣ ಪುಟ್ಟ ಸಮಸ್ಯೆಗಳನ್ನು ಕುಟುಂಬವೆಲ್ಲ ಕೂತು ಬಗೆಹರಿಸಿ. ಅವರ ಒಪಿನಿಯನ್ ಕೂಡ ಕೇಳಿ.
- ಪಾಸಿಟಿವ್ ಆಗಿರಿ: ಕುಟುಂಬದಲ್ಲಿ ಕೆಟ್ಟದ್ದು,ಒಳ್ಳೆಯದ್ದು ಇದ್ದದ್ದೆ. ಎಲ್ಲರನ್ನೂ ಎಲ್ಲರೂ ಹೊಗಳಿ. ಪಾಸಿಟಿವ್ ಆಗಿ ಮಾತನಾಡಿ. ನೀನು ಮೊನ್ನೆ ನಡೆದುಕೊಂಡ ರೀತಿ ಚೆನ್ನಾಗಿತ್ತು ಎಂದು ಮಕ್ಕಳಿಗೆ ಹೇಳಿ. ಇನ್ನು ಗಂಡನ ಒಳ್ಳೆ ಗುಣಗಳನ್ನು ಆಗಾಗ ಹೇಳುತ್ತಿರಿ. ಹೆಂಡತಿಗೂ ಅಷ್ಟೆ.