Sunday, August 14, 2022

Latest Posts

ಮನೆಯಲ್ಲಿ ಮಾಡಬಹುದು ರುಚಿಯಾದ Paneer Popcorn!

ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ರುಚಿ ಇಲ್ಲದೆ ಇರುವ ನಮ್ಮ ನಾಲಿಗೆಗೆ ಇಲ್ಲಿದೆ ಸೂಪರ್ ಪನೀರ್ ರೆಸಿಪಿ..

ಬೇಕಾಗುವ ಪದಾರ್ಥಗಳು:
ಪನೀರ್
ಸೇವ್ (ಪುಡಿ ಮಾಡಿ)
¼ ಕಪ್ ಜೋಳದ ಹಿಟ್ಟು
½ ಚಮಚ ಉಪ್ಪು
ಚಿಲ್ಲಿ ಪೌಡರ್
½ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
½ ಚಮಚ ಅರಿಶಿನ
ಚಾಟ್ ಮಸಾಲ
ಮ್ಯಾಗಿ ಮಸಾಲ
ಕೊತ್ತಂಬರಿ
ನೀರು

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ¼ ಕಪ್ ಜೋಳದ ಹಿಟ್ಟು, ½ ಚಮಚ ಉಪ್ಪು, ಚಿಲ್ಲಿ ಪೌಡರ್, ½ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ½ ಚಮಚ ಅರಿಶಿನ, ಚಾಟ್ ಮಸಾಲ, ಮ್ಯಾಗಿ ಮಸಾಲ, ಕೊತ್ತಂಬರಿ ಮತ್ತು ನೀರು ಬೆರಸಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ
  • ಪನೀರ್ ಅನ್ನು ಚೌಕಾಕಾರವಾಗಿ ಹೆಚ್ಚಿ ಅದನ್ನು ಹಿಟ್ಟಿನಲ್ಲಿ ಹಾಕಿ, ಒಂದೊಂದೇ ಪನೀರ್ ಅನ್ನು ತೆಗೆದು ಪುಡಿ ಮಾಡಿರುವ ಸೇವ್ ನಲ್ಲಿ ಸೇರಿಸಿ.
  • ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಿದ್ದವಿರುವ ಪನೀರ್ ಅನ್ನು ಡೀಪ್ ಫ್ರೈ ಮಾಡಿ. ಕಂದು ಬಣ್ಣ ಬಂದ ನಂತರ ತೆಗೆಯಿರಿ

ಸಿದ್ದವಾಯಿತು ನಿಮ್ಮ ಟೇಸ್ಟೀ ಪನೀರ್ ಪಾಪ್ ಕಾರ್ನ್ ಕೆಚಪ್ ಜೊತೆ ಸವಿಯಲು ಸಿದ್ಧ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss