ಮನೆಯಲ್ಲಿ ಹಾಲು ಇಲ್ಲ ಅಥವಾ ಸಡನ್ ಆಗಿ ಯಾರಾದರೂ ಬಂದರೆ ಲೆಮನ್ ಟೀ ಮಾಡಿ ಕುಡಿಬಹುದು. ಕಾಫಿ ಟೀ ಎರಡೇ ಕುಡಿದು ಬೋರಾದರೂ ಕೂಡ ಈ ಲೆಮನ್ ಟೀ ಕುಡಿಯಬಹುದು. ಹೇಗೆ ಮಾಡೋದು ಈ ಲೆಮನ್ ಟೀ ನೋಡಿ..
ಬೇಕಾಗಿರುವ ಸಾಮಾಗ್ರಿ
- ಪುದೀನ
- ನಿಂಬು
- ಬೆಲ್ಲ
- ಟೀ
- ನೀರು
ಮಾಡುವ ವಿಧಾನ - ಮೊದಲು ನೀರು, ಬೆಲ್ಲ, ಪುದೀನ ಹಾಕಿ ಕುದಿಸಿ
- ನಂತರ ಇದಕ್ಕೆ ಸ್ವಲ್ಪ ಟೀ ಪುಡಿ ಹಾಕಿ ಒಲೆ ಆರಿಸಿಬಿಡಿ
- ನಂತರ ಎರಡು ನಿಮಿಷ ಪಾತ್ರೆ ಮುಚ್ಚಿಡಿ
- ನಂತರ ಇದನ್ನು ಸೋಸಿ ಅದಕ್ಕೆ ನಿಂಬೆಹಣ್ಣು ಹಾಕಿ ಕುಡಿದರೆ ಲೆಮನ್ ಟೀ ರೆಡಿ.’