Sunday, July 3, 2022

Latest Posts

ಕಾಣೆಯಾದವರು ಯಲ್ಲಾಪುರದ ಗಣೇಶ್ ಪಾಲ್ ಹೊಳೆಯಲ್ಲಿ ಶವವಾಗಿ ಪತ್ತೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಹನ್ನೊಂದು ತಿಂಗಳ ಮಗು ಸಮೇತ ಕಾಣೆಯಾಗಿದ್ದ ಮೂವರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗಣೇಶ್ ಪಾಲ್ ನಲ್ಲಿ ನಡೆದಿದೆ.

ಮೃತ ಪಟ್ಟವರನ್ನು ಹಿತ್ಲಳ್ಳಿ ಸಮೀಪದ ಕಲಕೂಡ್ಲಿನ ರಾಜೇಶ್ವರಿ ನಾರಾಯಣ ಹೆಗಡೆ (55), ಇವರ ಮಗಳು ವಾಣಿ ಪ್ರಕಾಶ ವೈ (28) ಹಾಗೂ ಇವರ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.

ಶುಕ್ರವಾರ ಈ ಮೂವರು ಯಲ್ಲಾಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಒಂದು ದಿನವಾದರೂ ಮನೆಗೆ ವಾಪಸ್ಸು ಆಗದ ಹಿನ್ನಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಿತ್ಲಳ್ಳಿ ಸಮೀಪದ ಗಣೇಶ್ ಪಾಲ್ ಹೊಳೆಯಲ್ಲಿ ತಾಯಿ, ಮಗಳು ಮತ್ತು 11 ತಿಂಗಳ ಮೊಮ್ಮಗನ ಮೃತದೇಹಗಳು ಸಿಕ್ಕಿವೆ.

ನದಿಗೆ ಹಾರಿ ಮೂವರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ಆದರೆ ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ. ಯಲ್ಲಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss