ಮನೆಯೊಳಗೆ ಹಸಿರಿದ್ದಷ್ಟು ಮನೆ ನೋಡಲು ಚಂದ. ಇದಷ್ಟೇ ಅಲ್ಲ, ಹಸಿರು ಕಣ್ಮುಂದೆ ಇದ್ದರೆ ಮನಸಿಗೆ ಶಾಂತಿಯೂ ಇರುತ್ತದೆ. ಕಣ್ಣಿಗೂ ಇದು ತಂಪು. ಆದರೆ ಮನೆಯಲ್ಲಿ ಎಲ್ಲಾ ರೀತಿಯ ಗಿಡಗಳನ್ನು ಬೆಳೆಸಲು ಆಗುವುದಿಲ್ಲ. ಇನ್ನು ಮನೆಯೊಳಗೆ ಗಿಡ ಇಟ್ಟರೆ ಅವುಗಳಿಗೆ ಬಿಸಿಲು ಸರಿಯಾಗಿ ಸಿಗದೆ ಹಾಳಾಗುತ್ತವೆ. ಹಾಗಾಗಿ ಆಯ್ಕೆ ಮಾಡುವಾಗ ಬಿಸಿಲು ಕಡಿಮೆ ಇದ್ದರೂ ಏನೂ ಆಗದಂಥ, ಅಥವಾ ಕೆಲವು ಕಡೆ ಆರ್ಟಿಫಿಶಿಯಲ್ ಗಿಡಗಳನ್ನೂ ಇಡಬಹುದು. ನಿಮ್ಮ ಮನೆಯೊಳಗೆ ಎಲ್ಲಿ ಹೇಗೆ ಇಡಬಹುದು ಎನ್ನಲು ಈ ಟಿಪ್ಸ್ಗಳು..
- ಹಾಲ್ನಲ್ಲಿ: ಹಾಲ್ನಲ್ಲಿ ನಿಮ್ಮ ಟಿವಿ ರಿಮೋಟ್, ಸೆಟ್ಅಪ್ಬಾಕ್ಸ್, ಸ್ಟೆಬಿಲೈಸರ್ ಇಡಲು ನಿಮಗೆ ಒಂದು ಟೇಬಲ್ ಬೇಕೇ ಬೇಕು. ಆ ಟೇಬಲ್ ಮೇಲೆ ಒಂದೆರಡು ಗಿಡಗಳಿಡಿ. ಪ್ರತಿ ಬಾರಿ ಟಿವಿ ನೋಡುವಾಗಲೂ ಕಣ್ಣು ಹಸಿರಿನ ಮೇಲೂ ಹೋಗುತ್ತದೆ.
- ಅಡುಗೆಮನೆ: ಅಡುಗೆ ಮನೆಯ ಶೆಲ್ಫ್ ಮೇಲೆ ಒಂದು ಗಿಡ ಇಡಬಹುದು, ಅಥವಾ ಅಡುಗೆ ಮನೆಯ ಗೋಡೆ ಬಳಿ ಹ್ಯಾಂಗಿಂಗ್ ಪಾಟ್ ಹಾಕಿ ಗಿಡ ಇಟ್ಟರೆ ಹೆಲ್ತಿಯಾಗಿ ಕಾಣಲಿದೆ.
- ಬೆಡ್ರೂಂ: ಬೆಡ್ರೂಂನಲ್ಲಿ ನಿಮಗಿಷ್ಟ ಬಂದಂಥ ಡಿಸೈನ್ನಲ್ಲಿ ಗಿಡಗಳನ್ನು ಇಡಬಹುದು. ನಿಜವಾದ ಗಿಡಗಳನ್ನು ಇಡಲು ಆಗದಿದ್ದರೆ, ಆರ್ಟಿಫಿಶಿಯಲ್ ಗಿಡಗಳನ್ನು ಇಡಬಹುದು. ಅದು ಕೂಡ ಚೆನ್ನಾಗಿಯೇ ಕಾಣುತ್ತದೆ. ಜೊತೆಗೆ ಫೋಟೊ ಗ್ಯಾಲರಿ ಮಾಡಿಕೊಂಡರೆ ಮನೆಯ ಅಂದಲೇ ಬದಲಾಗುತ್ತದೆ.
ಬಾಲ್ಕನಿ: ಬಾಲ್ಕನಿಯಲ್ಲಿ ಹ್ಯಾಂಗಿಂಗ್ ಗಾರ್ಡನ್,ಟೆರೇಸ್ ಗಾರ್ಡನ್ ಎಲ್ಲವನ್ನೂ ಮಾಡಬಹುದು. ಇಲ್ಲಿಎಲ್ಲ ರೀತಿಯ ಗಿಡ ಬೆಳೆಸಲು ಸಾಧ್ಯ. ಅಡುಗೆಗೆ ಬೇಕಾದ ಕೊತ್ತಂಬರಿ, ಕರಿಬೇವು, ಪಲಾವ್ ಎಲೆ ಹಾಗೂ ದೇವರ ಪೂಜೆಗೆ ಒಳ್ಳೆ ಹೂವುಗಳನ್ನು ಬೆಳೆಸಬಹುದು.
- ಅಂಗಳ: ಮನೆಯಂಗಳದಲ್ಲಿಯೂ ಗಿಡಗಳನ್ನು ಬೆಳೆಸಬಹುದು, ನಿಮ್ಮ ಬೆಡ್ರೂಮಿನಿಂದ ಅಥವಾ ಮನೆ ಹೊರಗೆ ಬಾಗಿಲಿದ್ದು, ಅದರಲ್ಲಿ ಚೆನ್ನಾಗಿ ಗಿಡಗಳನ್ನು ಬೆಳೆಸಬಹುದು ಜೊತೆಗೆ ಚೇರ್ ಅಥವಾ ಟೇಬಲ್ ಹಾಕಿದರೆ ಆರಾಮಾಗಿ ಕೂತು ಟೀ ಕುಡಿಯುವ ತಾಣ ನಿಮ್ಮದಾಗುತ್ತದೆ.
- ಯೋಗ ರೂಂ: ಕೆಲವರು ತಮ್ಮ ಮನೆಗಳಲ್ಲಿ ಒಂದು ರೂಮನ್ನು ವರ್ಕೌಟ್ ಅಥವಾ ಯೋಗಕ್ಕಾಗಿ ಇಟ್ಟಿರುತ್ತಾರೆ. ಆ ಖಾಲಿ ರೂಮಿಗೆ ಹಸಿರು ಮ್ಯಾಟ್ ಹಾಕಿ ಸುತ್ತ ಗಿಡಗಳನ್ನು ಇಟ್ಟು, ಒಂದು ಬುದ್ಧನ ಮೂರ್ತಿ ಇಟ್ಟರೆ ಚೆನ್ನಾಗಿ ಕಾಣುತ್ತದೆ.