Thursday, August 11, 2022

Latest Posts

ಮನೆಯ ಗೋಡೆ, ನೆಲ, ಅಡುಗೆ ಕಟ್ಟೆ ಎಲ್ಲೆಂದರಲ್ಲಿ ಕಲೆ ಇವೆಯೇ? ಕಲೆ ನಿವಾರಣೆಗೆ ಈ ಟಿಪ್ಸ್ ಫಾಲೋ ಮಾಡಿ…

ಮನೆಯ ಗೋಡೆಗಳು, ನೆಲ, ಅಡುಗೆ ಕಟ್ಟೆ ಹೀಗೆ ಒಂದಲ್ಲಾ ಒಂದು ಬದಿಗೆ ಕಲೆ ಇದ್ದೇ ಇರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಇರುವ ಮನೆಯಲ್ಲಂತೂ ಮುಗಿದೇ ಹೋಯಿತು. ಅವರ ಬರವಣಿಗೆ, ಬಣ್ಣಗಳ ಚಿತ್ತಾರ ಎಲ್ಲದಕ್ಕೂ ಮನೆಯ ಗೋಡೆಗಳೆ ಸಾಕು. ಎಲ್ಲೆಂದರಲ್ಲಿ ತಮ್ಮ ಕ್ರೀಯಾ ಶೀಲತೆಯನ್ನು ತೋರಿಸುತ್ತಿರುತ್ತವೆ. ಇಂಥಹ ಕಲೆಗಳನ್ನು ನಾವೇ ಸ್ವಚ್ಛ ಮಾಡಿಕೊಳ್ಳಬಹುದು. ಈ ಟಿಪ್ಸ್‌ಗಳನ್ನು ಫಾಲೋ ಮಾಡಿ..

  • ವಿನಿಗರ್‌ನ್ನು ಸಣ್ಣ ಬ್ರೇಶ್‌ಗೆ ಹಚ್ಚಿಕೊಂಡು ಕಲೆಗಳು ಇರುವ ಜಾಗದಲ್ಲಿ ಉಜ್ಜಬೇಕು. ವಿನಿಗರ್ ಬಳಸಿದರೆ ಕೀಟಗಳು ಸಹ ಹೋಗುತ್ತವೆ. ಕಲೆ ಬೇಗ ಹೋಗುತ್ತದೆ.
  • ಅಡುಗೆ ಕಟ್ಟೆಯ ಮೇಲೆ, ನೆಲದ ಮೇಲೆ ಹುಳಿ ಅಂಶ ಬಿದ್ದು ಕಲೆಗಳಾಗುತ್ತವೆ. ಅಂಥ ಕಲೆಗಳನ್ನು ನಿವಾರಣೆ ಮಾಡಲು ಸೀಮೆ ಎಣ್ಣೆಯನ್ನು ಬಳಸ ಬೇಕು. ಕಲೆಗಳಾದ ಜಾಗದಲ್ಲಿ ಸೀಮೆ ಎಣ್ಣೆ ಹಚ್ಚಿದರೆ ಹುಳಿ ಅಂಶದ ಕಲೆ ಹೋಗುತ್ತದೆ.
  • ವೈಟ್ ಟೂತ್ ಪೇಸ್ಟ್ ಕಲೆ ನಿವಾರನೆಗೆ ಬೆಸ್ಟ್. ವೈಟ್ ಕಲರ್ ಇರುವ ಟೂತ್ ಪೇಸ್ಟ್‌ನ್ನು ಮನೆಯಲ್ಲಿ ಕಲೆಗಳಿರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ತಿಕ್ಕಬೇಕು. ಬೇಗ ಕಲೆಯೂ ಗೋಗುತ್ತದೆ. ಬಿಳಿ ಬಣ್ಣವೂ ಆಗುತ್ತದೆ.
  • ಗೋಡೆಗಳ ಮೇಲೆ ಇರುವ ಕಲೆಯನ್ನು ನಿವಾರಣೆ ಮಾಡಲು ಕೆಲವರು ಡ್ರೈ ಶೀಟ್‌ಗಳನ್ನು ಬಳಸುತ್ತಾರೆ. ಆದರೆ ಡ್ರೈ ಶೀಟ್ ಬಳಸಿದರೆ ಗೋಡೆಗಳಲ್ಲಿನ ಬಣ್ಣಗಳು ಹೋಗಿ ಬಿಡುತ್ತದೆ. ನೆಲವೂ ಸಹ ಹಾಳಾಗುತ್ತದೆ. ಡ್ರೈ ಶೀಟ್‌ಗಳನ್ನು ನೀರಿನಲ್ಲಿ ನೆನೆಸಿಟ್ಟು ಅವುಗಳಿಂದ ಕಲೆ ಆದಲ್ಲಿ ಉಜ್ಜಬೇಕು.
  • ನೆಲದ ಮೇಲೆ ಆಗಿರುವ ಕಲೆಯನ್ನು ನಿವಾರಣೆ ಮಾಡಲು ವಿನಿಗಾರ್ ಜೊತೆ ಅಡುಗೆ ಸೋಡಾವನ್ನು ಸೇರಿಸಿಕೊಂಡು ಕಲೆ ಇರುವಲ್ಲಿ ತಿಕ್ಕಿದರೆ ಕಲೆ ಹೋಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss