Thursday, July 7, 2022

Latest Posts

ಮನೆ ಕಟ್ಟುವವರಿಗೆ, ಕಟ್ಟಿರುವ ಮನೆಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ: ನಿಮ್ಮ ಮನೆ ಅಂದ ಹೆಚ್ಚಿಸಲು ಸರಳ ಟಿಪ್ಸ್

ಹೊಸ ಮನೆ ಕಟ್ಟುವವರಿಗೆ ಮನೆಯ ಇಂಟೀರಿಯರ‍್ಸ್ ಡೆಕೋರೇಶನ್ಸ್ ಹೇಗೆ ಮಾಡುವುದು ಎನ್ನುವ ಚಿಂತೆ. ಇನ್ನು ಮನೆ ಆಗಲೇ ಕಟ್ಟಿದ್ದವರಿಗೆ ಈಗಿರುವ ಮನೆ ಹೇಗೆ ಆಲ್ಟರ್ ಮಾಡಿಸುವುದು ಅಥವಾ ಇರುವ ಮನೆಯನ್ನು ಹೇಗೆ ಡೆಕೋರೇಟ್ ಮಾಡಬೇಕು ಎಂಬ ಚಿಂತೆ. ಕಾಲಕಾಲಕ್ಕೆ ಡಿಸೈನ್‌ಗಳು ಬದಲಾಗುತ್ತವೆ. ಈಗಿಷ್ಟವಾದ ಟೈಲ್ಸ್, ಬಣ್ಣ ಮುಂದೆ ಹಿಡಿಸುವುದಿಲ್ಲ. ಹಾಗಾಗಿ ಎಲ್ಲ ಕಾಲಕ್ಕೂ ತಕ್ಕಂತಹ ಡಿಸೈನ್ ಮಾಡಿಕೊಳ್ಳುವುದು ಮುಖ್ಯ. ಮನೆಯ ಇಂಟೀರಿಯರ‍್ಸ್, ಮನೆ ಹೇಗೆ ಡೆಕೋರೇಟ್ ಮಾಡಬೇಕು ಎನ್ನುವವರ ಕೆಲಸವನ್ನು ನಾವು ಸುಲಭ ಮಾಡುತ್ತೇವೆ. ಹೇಗೆ ಅಂತೀರಾ ಪೂರ್ತಿ ಓದಿ.

  • ಇಂಟೀರಿಯರ‍್ಸ್ ಮಾಡಲು ಡಿಸೈನರ್‌ಗಳಿಗೆ ಆರ್ಡರ್ ನೀಡಬೇಕೆಂದೇನಿಲ್ಲ. ನಿಮಗಿಷ್ಟವಾದ ಯಾವುದಾದರೂ ಡಿಸೈನ್‌ನ್ನು ಅವರಿಗೆ ನೀಡಿ ಹೀಗೆ ಮಾಡಿಕೊಡಿ ಎಂದು ಕೇಳಿದರೆ ಆಯ್ತು. ನಿಮಗೆ ನಿಮ್ಮ ಮನೆ ಹೇಗಿರಬೇಕು ಎನ್ನುವ ಕಲ್ಪನೆ ಇದ್ದೇ ಇದೆ. ನಿಮಗಿಂತ ನಿಮ್ಮ ಮನೆಯನ್ನು ಚೆನ್ನಾಗಿ ಯಾರು ಅರಿಯಲು ಸಾಧ್ಯ?
  • ಮನೆಗೆ ಮೆಟ್ಟಿಲಿದ್ದರೆ ಅವನ್ನು ಹಾಗೇ ಬಿಡಬೇಡಿ, ಅದಕ್ಕೊಂದು ಬಣ್ಣವಿರಲಿ. ಯಾವುದಾದರೂಉದಾಹರಣೆಗೆ ರೆಡ್ ಎಂದಿಟ್ಟುಕೊಳ್ಳಿ, ಯಾವುದಾದರೂ ಅವಾರ್ಡ್ ಫಂಕ್ಷನ್‌ಗಳ ರೆಡ್ ಕಾರ್ಪೆಟ್ ಹಾಗೆ ನಿಮ್ಮ ಮನೆ ಕಾಣುತ್ತದೆ. ಕೊಳೆ ಆಗಿದ್ದೂ ತಿಳಿಯುವುದಿಲ್ಲ.
  • ಹಳತು ಹೊಸತರ ಮಿಶ್ರಣ ಇರಲಿ. ಆಂಟೀಕ್ ಹಾಗೂ ಮಾಡರ‍್ನ್ ಟಚ್ ಇರುವ ಎಲ್ಲವೂ ಎಂದಿಗೂ ಸುಂದರವೇ. ಈ ಶೈಲಿ ಎಂದಿಗೂ ಹಳತಾಗುವುದಿಲ್ಲ. ಹಳೇ ವಸ್ತುಗಳಿಗೆ ಬೆಲೆ ಜಾಸ್ತಿ.
  • ಓಣಿಗಳಿಗೆ ಬೇರೆ ಬೇರೆ ಬಣ್ಣಗಳು ಅಥವಾ ವಾಲ್ ಪೇಪರ್‌ಗಳಿರಲಿ. ಖಾಲಿಯಾದ, ಬೋರಿಂಗ್ ಆದ ಓಣಿಗಳ ಜಾಗ ಕೂಡ ಈಗ ಸುಂದರವಾಗಿ ಕಾಣುತ್ತದೆ.
  • ಸೂಕ್ತವಾದ ಲೈಟುಗಳಿರಲಿ. ನಿಮ್ಮ ಮನೆಯಲ್ಲಿ ಸುಕ್ತವಾದ ಲೈಟ್‌ಗಳಿರುವುದು ತುಂಬಾ ಮುಖ್ಯ. ಇದು ನಿಮ್ಮ ಮನೆಯ ಅಂದ ಹೆಚ್ಚಿಸುತ್ತದೆ. ಲೈಟುಗಳಲ್ಲಿಯೇ ಸಾವಿರ ವೆರೈಟಿಗಳಿಗೆ ಇವು ಶೋಪೀಸ್‌ಗಳೂ ಹೌದು. ಉಪಯೋಗಕ್ಕೂ ಬರುತ್ತದೆ.
  • ಬೆತ್ತದ ವಸ್ತುಗಳಿರಲಿ. ಹೌದು ಬೆತ್ತದ ಚೇರ್, ಜೋಕಾಲಿ, ಬೆತ್ತದ ಬುಟ್ಟಿ ಹಾಗೂ ಬೆತ್ತದ ಟೇಬಲ್ ಇವು ಆಕರ್ಷಕವಾಗಿ ಕಾಣುತ್ತವೆ. ಬೆತ್ತದಿಂದ ಮಾಡಿದ ಯಾವುದಾದರೂ ಆರ್ಟ್ ಸಿಕ್ಕರೆ ಅದನ್ನೂ ಖರೀದಿಸಿ. ನಿಮ್ಮ ಮನೆಯ ಒಂದು ಭಾಗವನ್ನು ಬೆತ್ತಕ್ಕೇ ಮೀಸಲಿಡಬಹುದು.
  • ಲೈಟ್ ಸ್ವಿಚ್‌ಗಳು ವಿಭಿನ್ನವಾಗಿರಲಿ. ಲೈಟ್ ಸ್ವಿಚ್‌ಗಳು ಹಳೆಯ ರೀತಿಯದ್ದಾಗದೇ ಹೊಸತಾಗಿರಲಿ. ಸಂಪ್ರದಾಯ ಮುರಿದು ಮುಂದೆಬರೋಣ.
  • ನಿಮ್ಮ ಮನೆಗಳಲ್ಲಿ ಕಬೋರ್ಡ್, ಟೇಬಲ್ ಇಲ್ಲವೆಂದರೆ ರೆಂಟ್‌ಗೆ ತೆಗೆದುಕೊಳ್ಳಬಹುದು. ಈ ಫರ್ನಿಚರ‍್ಸ್, ಕಬೋರ್ಡ್‌ಗಳು ನಿಮ್ಮ ಮನೆಯ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.
  • ಆಂಟೀಕ್‌ಗಳಿಗೆ ಮಹತ್ವ ನೀಡಿ. ಯಾವುದೋ ಹಳೆಯ ಪೇಂಟಿಂಗ್, ಇನ್ಯಾವುದೋ ಹಳೆಯ ಮೂರ್ತಿ, ಹೀಗೆ ಆಂಟೀಕ್‌ಗಳ ಮೇಲೆ ನಿಮ್ಮಹಣ ವಿನಿಯೋಗಿಸಿ. ಮನೆ ಎಷ್ಟೇ ಹೊಸತಾದರೂ ಆಂಟೀಕ್‌ಗಳು ಹಳೆಯದೆನಿಸುವುದಿಲ್ಲ.
  • ಸೀಲಿಂಗ್‌ಗಳಿಗೂ ಬಣ್ಣ ಬಳಿಯಿರಿ. ಹೌದು ಆಕಾಶದ ರೀತಿ ಸೀಲಿಂಗ್‌ಗೆ ಪೇಂಟ್ ಮಾಡಿಸಬಹುದು. ಆದರೆ ಇಡೀ ಮನೆ ಹೀಗೆ ಮಾಡಿಸಲಾಗದು. ಯಾವುದಾದರೂ ಒಂದು ಕೋಣೆಗೆ ಈ ರೀತಿ ಪ್ರಯೋಗ ಮಾಡಬಹುದು.
  • ಬಿಳಿ ಬಣ್ಣವೇ ಇರಲಿ. ಮನೆ ಒಳ ಭಾಗ ಬಿಳಿ ಬಣ್ಣ ಇರಲಿ. ಇದರಿಂದ ಮನೆ ಇನ್ನೂ ದೊಡ್ಡದಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ, ಯಾವ ಬಣ್ಣದ ಯಾವ ವಸ್ತು ತಂದರೂ ಮನೆಗೆ ಸೂಕ್ತವಾಗಿ ಕಾಣುತ್ತದೆ.
  • ಪೇಂಟಿಂಗ್‌ಗಳು ನಿಮ್ಮ ಮನೆಯ ಅಂದಕ್ಕೆ ಜೀವ ಕೊಡುತ್ತವೆ. ಯಾವುದಾದರೂ ಒಂದು ಗೋಡೆಗೆ ಒಂದು ದೊಡ್ಡ ಪೇಂಟಿಂಗ್ ಹಾಕಬಹುದು. ಇದರಿಂದ ಮನೆ ಸುಂದರವಾಗಿ ಕಾಣುತ್ತದೆ.
  • ಮನೆ ಒಳಗೆ ಗಿಡಗಳಿರಲಿ. ಹಸಿರು ಗಿಡಗಳು ನೋಡಲು ಚಂದ ಆರೋಗ್ಯಕ್ಕೂ ಚಂದ. ಹಾಗಾಗಿ ಮನೆಯ ಖಾಲಿ ಮೂಲೆಗಳಲ್ಲಿ ಗಿಡಗಳಿರಲಿ.
  • ದೊಡ್ಡ ಕಿಟಕಿಯಿರಲಿ. ಮನೆಯ ಹಾಲ್ ಅಥವಾ ರೂಮ್‌ಗಳಲ್ಲಿ ದೊಡ್ಡ ಕಿಟಕಿಯಿರಲಿ. ಗಾಳಿ ಬೆಳಕಿಗಿಂತ ಇನ್ನೇನೂ ಮನೆಯನ್ನು ಸುಂದರ ಮಾಡಲಾರದು. ಕಿಟಕಿಗಳಿಗೆ ತೆಳು ಪರದೆ ಹಾಕಿ ಬಿಟ್ಟರೆ ಸೂರ್ಯನ ಕಿರಣಗಳು ಮನೆಯಲ್ಲಿ ಇದ್ದೇ ಇರುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss