Saturday, July 2, 2022

Latest Posts

ಮನೆ, ಮನೆ ಸರ್ವೆಗೆ ಹೋಗುವ ಕೊರೋನಾ ವಾರಿಯರ್ಸ್ ಗೆ ಪೊಲೀಸ್ ಬೆಂಗಾವಲು

ಮೈಸೂರು: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮನೆ, ಮನೆ ಸರ್ವೆ ಕಾರ್ಯ ನಡೆಸುತ್ತಿರುವ ಕೊರೋನಾ ವಾರಿಯರ್ಸ್ಗೆ ಇದೀಗ ಪೊಲೀಸರ ಬೆಂಗಾವಲು ನೀಡಲಾಗಿದೆ. ಬೆಂಗಳೂರಿನಲ್ಲಿ ಮನೆ, ಮನೆ ಸರ್ವೆ ನಡೆಸಲು ಹೋದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಇದಾದ ಬಳಿಕ ಮೈಸೂರಿನ ಬನ್ನಿಮಂಟಪದಲ್ಲಿರುವ ಅಲೀಂ ನಗರದಲ್ಲಿ ಆಶಾ ಕಾರ್ಯಕರ್ತೆ ಸುಮಯಾ ಫಿರ್ಧೋಸ್ ಎಂಬುವರ ಮೇಲೆ ಹಲ್ಲೆ ನಡೆಸಲು ಯತ್ನಿಸಿ, ಅವ್ಯಾಶ್ಚ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯನ್ನು ಹಾಕಿದ್ದರು. ಈ ಘಟನೆಯಿಂದ ಮನೆ, ಮನೆ ಸರ್ವೆ ಕರ‍್ಯ ನಡೆಸುವುದಕ್ಕೆ ಕೊರೋನಾ ವಾರಿಯರ್ಸ್ಗಳಲ್ಲಿ ಒಂದು ರೀತಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಇದೀಗ ಕೊರೋನಾ ವಾರಿಯರ್ಸ್ಗೆ ಪೊಲೀಸರ ಬೆಂಗಾವಲು ಒದಗಿಸಿದೆ. ಮನೆ, ಮನೆ ಸರ್ವೆ ಕರ‍್ಯಕ್ಕೆ ಹೋಗುವ ಆಶಾ ಕಾರ್ಯಕರ್ತೆ, ನರ್ಸ್ ಹಾಗೂ ಆರೋಗ್ಯ ಇಲಾಖೆಯ ನೌಕರರಿಗೆ ಓರ್ವ ಪೊಲೀಸ್ ಪೇದೆ ಹಾಗೂ ಮಹಿಳಾ ಪೇದೆ ರಕ್ಷಣೆಯನ್ನು ನೀಡುತ್ತಿದ್ದಾರೆ. ಇದಲ್ಲದೆ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಸುಗ್ರಿವಾಜ್ಞೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವುದು ಕೊರೋನಾ ವಾರಿಯರ್ಸ್ಗೆ ಬಲ ಬಂದAತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss