ಮನೆ ಮುಂದೆ ಗಾರ್ಡನ್ ಮಾಡಲು ಜಾಗ ಇಲ್ಲವೆ? ಅಲ್ಪಸ್ವಲ್ಪ ಜಾಗದಲ್ಲೇ ಮಾಡಬಹುದಾದ ವರ್ಟಿಕಲ್ ಗಾರ್ಡನ್!

0
177

ಪ್ರತಿಯೊಬ್ಬರಿಗೂ ಮನೆ ಮುಂದೆ ತಮ್ಮದೇ ಆದ ಗಾರ್ಡನ್ ಇರಬೇಕು. ಅಲ್ಲಿ ತಮಗಿಷ್ಟದ ತರಕಾರಿ, ಹೂವು ಹಾಗೂ ಹಣ್ಣು ಬೆಳೆಯಬೇಕು ಎಂಬ ಆಸೆ ಇರುತ್ತದೆ. ಆದರೆ ಈರೀತಿ ಮಾಡಲು ತುಂಬಾ ದೊಡ್ಡ ಜಾಗ ಇರಬೇಕು ಅಥವಾ ಸಿಟಿಗಳಲ್ಲಿ ಇರಬಾರದು. ಅಪಾರ‍್ಟ್‌ಮೆಂಟ್ ಹಾಗೂ ಬಾಡಿಗೆ ಮನೆಯ ಯಾವ್ಯಾವುದೋ ಫ್ಲೋರ್‌ನಲ್ಲಿರುವವರಿಗೆ ಈ ರೀತಿ ಗಾರ್ಡ್‌ನ್ ಮಾಡುವ ಆಸೆ ಆಸೆಯಾಗಿಯೇ ಉಳಿಯುತ್ತದೆ. ಅವರು ಮನೆಯೊಳಗೆ ಮಾತ್ರ ಗಿಡಗಳನ್ನು ಬೆಳೆಸಬಹುದು ಆದರೆ ಮನೆಯೊಳಗೆ ಅಥವಾ ಮನೆ ಮುಂದಿನ ಸ್ವಲ್ಪ ಜಾಗದಲ್ಲೂ ಈ ರೀತಿ ಗಿಡಗಳನ್ನು ಬೆಳೆಸಬಹುದು.. ಹೇಗೆ ಅಂತೀರಾ ಇಲ್ಲಿ ನೋಡಿ..
ಕಬ್ಬಿಣದ ಮೆಶ್: ಮರದ ಹಲಗೆ ಮೇಲೆ ಕಬ್ಬಿಣದ ಮೆಶ್ ಹಾಕಿಸಿ. ಮರದ ಹಲಗೆಗೆ ಅದು ಸಿಕ್ಕಿಕೊಂಡ ನಂತರ ಅದಕ್ಕೊಂದು ಸೆಣಬಿದ ಪದರದ ಬಟ್ಟೆ ಬಿಡಿ. ಅದರ ಹಿಂದೆ ಪ್ಲಾಸ್ಟಿಕ್ ಸಿಕ್ಕಿಸಿ, ಪ್ಲಾಸ್ಟಿಕ್‌ಗೆ ತೂತು ಮಾಡಿ ಬಳ್ಳಿಗಳನ್ನು ಬೆಳೆಸಬಹುದು. ಅಥವಾ ಶೋ ಗಿಡಗಳನ್ನು ಬೆಳೆಸಬಹುದು.
ಉಪಯೋಗಿಸಿದ ಬಾಟಲಿ: ನಾವು ಉಪಯೋಗಿಸಿದ ಬಾಟಲಿಗಳನ್ನು ಬಿಸಾಡುತ್ತೇವೆ. ಆದರೆ ಇದರಲ್ಲೂ ಗಿಡಗಳನ್ನು ಬೆಳೆಸಬಹುದು. ಪ್ಲಾಸ್ಟಿಕ್ ಬಾಟಲಿಯ ಮಧ್ಯಭಾಗವನ್ನು ಕತ್ತರಿಸಿ, ಮಣ್ಣು ತುಂಬಿ ಗಿಡ ಬೆಳೆಸಬಹುದು. ಇದಕ್ಕೆ ದಾರ ಕಟ್ಟಿ ಬಿಟ್ಟರೆ ನೋಡಲು ಸುಂದರವಾಗಿ ಕಾಣುತ್ತದೆ. ಹಾಗೂ ಮನೆಯಲ್ಲಿ ಗಿಡಗಳು ಇದ್ದರೆ ಉಸಿರಾಟದ ತೊಂದರೆ ಬರುವುದಿಲ್ಲ.
ಶೆಲ್ಫ್ ಅಪ್ ಗಾರ್ಡನ್: ಈ ರೀತಿ ಗಾರ್ಡನ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಗೋಡೆ ಅಥವಾ ಮರದ ಹಲಗೆ ಸಹಾಯದಿಂದ ಚಿಕ್ಕ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಿ, ಹಲಗೆಗೆ ನೇತು ಹಾಕಬಹುದು. ಇದು ನೋಡಲು ಸುಂದರವಾಗಿ ಕಾಣುತ್ತದೆ.
ಹ್ಯಾಂಗಿಂಗ್ ಆರ್ಗನೈಸರ‍್ಸ್: ಇದು ನಿಮ್ಮ ಮನೆಯಲ್ಲೇ ಇರುವಂಥದ್ದು. ನೀವು ಪೆನ್, ಕಾಗದ, ಏನಾದರೂ ಡಾಕ್ಯುಮೆಂಟ್‌ಗಳು, ಕರೆಂಟ್ ಬಿಲ್ ಇಂಥವುಗಳನ್ನು ಹಾಕಿಡಲು ಬಳಸುವ ಸ್ಟಾಂಡ್ ರೀತಿಯ ಬಟ್ಟೆಯ ಸಾದನ. ಇದರಲ್ಲಿರುವ ಕಂಪಾರ್ಟ್‌ಮೆಂಟ್‌ಗಳಲ್ಲಿ ಮಣ್ಣು ತುಂಬಿ ಗಿಡ ಬೆಳೆಸಿ ನೇತುಹಾಕಬಹುದು.
ಪಿವಿಸಿ ಪೈಪ್‌ಗಳು: ನಿಮ್ಮ ಮನೆಯಲ್ಲೇ ಇರುವ ಪೈಪ್‌ಗಳಿಗೆ ದೊಡ್ಡ ಹೋಲ್ ಮಾಡಿ, ಮಣ್ಣು ತುಂಬಿ ಗಿಡ ಬೆಳೆಸಬಹುದು. ಇದು ಎಕೋ ಫ್ರೆಂಡ್ಲಿ ಹಾಗೂ ನೋಡಲು ಸುಂದರ

LEAVE A REPLY

Please enter your comment!
Please enter your name here