Wednesday, August 17, 2022

Latest Posts

ಮನ್ ಕೀ ಬಾತ್’ನಲ್ಲಿ ಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ತಿಳಿಸಿದ ಮೋದಿ

ನವದೆಹಲಿ: ಇಂದು ಪ್ರಧಾನಿ ಮೋದಿ 69 ನೇ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಇಂದಿನ ಮನ್ ಕೀ ಬಾತ್ ನಲ್ಲಿ ಮಕ್ಕಳಿಗೆ ಕತೆ ಹೇಳುವ ವಿಶೇಷತೆಯ ಕುರಿತು ಮಾತನಾಡಿದ್ದಾರೆ.

ಇಂದು 69 ನೇ ಸರಣಿಯ ಮನ್ ಕೀ ಬಾತ್ ಆಗಿತ್ತು. ಮಕ್ಕಳಿಗೆ ಕಥೆಯನ್ನು ಹೇಳಬೇಕು. ನಮ್ಮ ದೇಶದ ಇತಿಹಾಸವನ್ನು ಕಥೆಯ ಮೂಲಕ  ಮಕ್ಕಳಿಗೆ ಹೇಳಬೇಕು, ಕಥೆ ಹೇಳುವುದು ನಮ್ಮ ಪರಂಪರೆ. ನಾವು ಕೇಳಿದ ರಾಮಾಯಣ, ಮಹಾಬಾರತ, ಪಂಚತಂತ್ರ ಕಥೆಗಳನ್ನು ಮಕ್ಕಳಿಗೂ ಹೇಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ವೈಜ್ಞಾನಿಕ ಕಥೆಗಳನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಇಂಡಿಯನ್ ಸ್ಟೋರಿ ಟೆಲ್ಲಿಂಗ್ ನೆಟ್‌ ವರ್ಕ್‌ನಲ್ಲಿ ಹಲವಾರು ಕಥೆಗಳಿವೆ. ಬೆಂಗಳೂರಿನ ವಿಕ್ರಂ ಶೀಧರ್ ಬಾಪುವಿನ ಕುರಿತ ಕಥೆಗಳನ್ನು ಸಂಗ್ರಹ ಮಾಡಿದ್ದಾರೆ” ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ದಾಯಕ ಕಥೆಗಳನ್ನು ಹೇಳಿಕೊಡಬೇಕು. ಇದನ್ನು ನೀವೆಲ್ಲರು ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಇದರ ಜೊತೆಗೆ ಯಶಸ್ವಿ ರೈತರ ಬಗ್ಗೆಯೂ ಮಾತನಾಡಿದರು. ಕೊರೋನಾ ಬಿಕ್ಕಟ್ಟಿನಲ್ಲಿ ನಮ್ಮ ರೈತರ ಜೀವನ ನಮಗೆ ಸ್ಪರ್ತಿ ಎಂದು ಹೇಳಿದರು.  ದೇಶದಲ್ಲಿ ಕೊರೋನಾ ಪರಿಸ್ಥಿತಿ ಕುಟುಂಬಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ.  ಕುಟುಂಬದ ಸದಸ್ಯರನ್ನು ಹತ್ತಿರಕ್ಕೆ ತಂದಿದೆ ಎಂದು ಹೇಳಿದರು

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!