Thursday, August 18, 2022

Latest Posts

ಮರದಿಂದ ಮರಕ್ಕೆ ಹಾರುವ ಹಾವು ಪ್ರತ್ಯಕ್ಷ, ಅರಮನೆ ನಗರಿ ಮೈಸೂರಿಗೆ ಬಂದ ಅಪರೂಪದ ಅತಿಥಿ!

ಮೈಸೂರು: ಅರಮನೆ ನಗರಿ ಮೈಸೂರಿಗೆ ಅಪರೂಪದ ಅತಿಥಿಯೊಬ್ಬರು ಬಂದಿದ್ದಾರೆ. ಸಾಮಾನ್ಯವಾಗಿ ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ ಈ ಅತಿಥಿ ಅದು ಹೇಗೋ ದಾರಿ ತಪ್ಪಿ, ಹಾರಾಡಿಕೊಂಡು ಅರಮನೆ ನಗರಿ ಮೈಸೂರಿಗೆ ಬಂದಿದ್ದಾರೆ. ಈ ಅಪರೂಪದ ಅತಿಥಿ ಮನೆ ಬಾಗಿಲಿನಲ್ಲಿಯೇ ನೇತಾಡಿಕೊಂಡು, ಬುಸುಗುಟ್ಟುತ್ತಿದ್ದನ್ನು ನೋಡಿ, ಮನೆಯವರು, ಜನರು ಬೆಚ್ಚಿ ಬಿದ್ದಿದ್ದಾರೆ. ಆ ಅತಿಥಿ ಯಾರಪ್ಪ ಎಂದರೆ, ಮರದಿಂದ ಮರಕ್ಕೆ ಹಾರುವ ಹಾವು !
ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಬಾಗಿಲಿನ ಸರಳಗಳಿಗೆ ಜೋತು ಬಿದ್ದು, ಆಟವಾಡುತ್ತಿದ್ದ ಹಾವನ್ನು ನೋಡಿ ನಿವಾಸಿಗಳು ಬೆಚ್ಚಿ ಬಿದ್ದರು. ಇದು ಯಾವುದೋ ಬೇರೆ ಹಾವಿನ ರೀತಿಯಿದೆಯೆಲ್ಲಾ ಎಂದು ಯೋಚಿಸಿ, ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದಾಗ, ಅದು ನೆಲದಿಂದ ಮರಕ್ಕೆ ಹಾರುತ್ತಾ ಹೋಯಿತು, ಅಲ್ಲಿಂದ ಓಡಿಸಲು ಪ್ರಯತ್ನಿಸಿದಾಗ ಮರದಿಂದ ಗಿಡಕ್ಕೆ, ಗಿಡದಿಂದ ಮರಕ್ಕೆ, ಮರದಿಂದ ನೆಲಕ್ಕೆ ಹಾರುತ್ತಲೇ ಇತ್ತು. ಆಗ ಎಲ್ಲರಿಗೂ ಇದು ಹಾರುವ ಹಾವು ಎಂಬುದು ಸ್ಪಷ್ಟವಾಯಿತು. ಸಾಮಾನ್ಯವಾಗಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಈ ಹಾವು ಎತ್ತರದ ಮರಗಳಿಂದ ಮರಗಳಿಗೆ ಹಾರುತ್ತವೆ. ಇವು ವಿಷಕಾರಿಗಳಲ್ಲ. ಇದು ಅಪರೂಪದ ಪ್ರಭೇದದ ಹಾವುಗಳಾಗಿವೆ. ಆದರೆ ಇದು ಅಲ್ಲಿಂದ ಮೈಸೂರಿಗೆ ಹೇಗೆ ಬಂತು ಎಂಬುದೇ ಯಾರಿಗೂ ತಿಳಿಯದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!