Tuesday, June 28, 2022

Latest Posts

ಮರಳು ಅಕ್ರಮ ಸಾಗಾಟ: ವಾಹನ ಸಹಿತ ಇಬ್ಬರು ಪೊಲೀಸ್ ವಶಕ್ಕೆ

ಮಡಿಕೇರಿ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ವೀರಾಜಪೇಟೆ ನಗರ ಠಾಣೆ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ವೀರಾಜಪೇಟೆಯ ಒಂದನೇ ಪೆರಂಬಾಡಿಯ ಸರ್ಕಾರಿ ತೋಡಿನಿಂದ ಅಕ್ರಮವಾಗಿ ಮರಳು ಕದ್ದು ತೆಗೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ನಗರ ಠಾಣಾಧಿಕಾರಿ ಭೋಜಪ್ಪ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮವಾಗಿ ಮರಳು ಕದ್ದು ಸಾಗಿಸಲು ಯತ್ನಿಸುತ್ತಿದ್ದ ಮಹೇಂದ್ರ ಜೀತೊ ವಾಹನ (ಕೆಎ12-ಬಿ3237) ಹಾಗೂ ಮರಳು ಕಳ್ಳತನ ಮಾಡುತ್ತಿದ್ದ ಪೆರಂಬಾಡಿಯ ನಿವಾಸಿಗಳಾದ ಇಸ್ಮಾಯಿಲ್ ಹಾಗೂ ನಿಸಾರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಭೋಜಪ್ಪ ಅವರೊಂದಿಗೆ ಸಿಬ್ಬಂದಿಗಳಾದ ಮಹಿಳಾ ಹೆಡ್ ಕಾನ್‍ಸ್ಟೇಬಲ್ ಗೀತಾ, ಮುಸ್ತಾಫ ಗಿರೀಶ್, ಮುನೀರ್, ಸಂತೋಷ, ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss