ಹೊಸ ದಿಗಂತ ವರದಿ, ಶಿವಮೊಗ್ಗ:
ಮರಳು ಕ್ವಾರೆಗಳಿಂದ ಮರಳು ಸಾಗಾಣಿಕೆಗೆ ಅನುಮತಿ ನೀಡುವಂತೆ ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಲಾರಿ ಚಾಲಕರು
ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮರಳು ಸಾಗಾಣಿಕಾ ಲಾರಿಗಳಿದ್ದು ಈ ಉದ್ಯಮವನ್ನ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಮಂದಿ ಇದ್ದಾರೆ. ತುಂಗಾ ಮತ್ತು ಮಾಲತಿ ನದಿ ತೀರದಲ್ಲಿ ಮರಳು ಕ್ವಾರೆಗಳಿದ್ದುಪೀಸ್ ಇವುಗಳಿಗೆ ಸರ್ಕಾರದಿಂದ ಮರಳು ಸಾಗಾಣಿಕೆಗೆ ಲೀಸ್ ಇರುತ್ತದೆ. ಕಳೆದ ಎಂಟು ತಿಂಗಳಿಂದ ಕೋವಿಡ್ ಕಾರಣ ಹೇಳಿ ಬಂದ್ ಮಾಡಿದ್ದು ಇನ್ನೂ ಪುನರಾರಂಭಕ್ಕೆ ಅನುಮತಿ ನೀಡದೇ ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವವರ ಬದುಕು ಬೀದಿಗೆ ಬಿದ್ದಿದೆ.
ಅಲ್ಲದೇ ಅಕ್ರಮ ಮರಳು ಸಾಗಾಣಿಕೆ ತಾಲ್ಲೂಕಿನಾದ್ಯಂತ ಅವ್ಯಹತವಾಗಿ ನಡೆಯುತ್ತಿದ್ದು ಸಾರ್ವಜನಿಕರು ದುಪ್ಪಟ್ಟು ಬೆಲೆ ತೆತ್ತು ಮರಳು ಖರೀದಿಸುವ ಪ್ರಮೇಯ ಬಂದೊದಗಿದೆ.
ಬ್ಯಾಂಕು ಫೈನಾನ್ಸ್ ಗಳಲ್ಲಿ ಸಾಲ ಮಾಡಿ ಲಾರಿ ಖರೀದಿಸಿ ಬದುಕು ಸಾಗಿಸುತ್ತಿದ್ದವರು ಇಂದು ದುಡಿಮೆ ಇಲ್ಲದೆ ಸಾಲ ಮರುಪಾವತಿ ಮಾಡಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಬಂದೊದಗಿದೆ.
ತಹಶಿಲ್ದಾರರು ಮುಂದಿನ ಶನಿವಾರದ ಒಳಗೆ ಮರಳು ಸಾಗಾಣಿಕೆಗೆ ಅನುಮತಿ ನೀಡಬೇಕಾಗಿ ಆಗ್ರಹಿಸಿ ಲಾರಿ ಮಾಲಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.