Wednesday, August 10, 2022

Latest Posts

ಮರಳು ಸಾಗಾಣಿಕೆ ಗೊಂದಲಗಳಿಗೆ ಶೀಘ್ರ ತೆರೆ: ಶಾಸಕ ಡಾ.ವೈ. ಭರತ್ ಶೆಟ್ಟಿ

ಸುರತ್ಕಲ್: ರಾಜ್ಯ ಸರಕಾರ ನೂತನ ಮರಳು ನೀತಿ 2020 ಸ್ಪಷ್ಟ ಮಾರ್ಗಸೂಚಿಯೊಂದಿಗೆ ಜಾರಿಗೊಳಿಸಿದ್ದು ವಿಕೇಂದ್ರೀಕರಣ ವ್ಯವಸ್ಥೆ ಮಾಡಲಾಗಿದೆ.ಶೀಘ್ರ ಮರಳು ಸಾಗಾಣಿಕೆ ಗೊಂದಲಗಳಿಗೆ ತೆರೆ ಬೀಳಲಿದೆ. ಜನರಿಗೆ ಮರಳು ಸಿಗುವಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಕಾಂಗ್ರೆಸ್ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಮರಳು ವಿಚಾರವನ್ನು ವಿನಾಕಾರಣ ವೈಭವೀಕರಿಸುತ್ತಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ.
2011ರಲ್ಲಿ ಲೋಕೋಪಯೋಗಿ ಇಲಾಖೆ ಸುಪದರ್ಿಗೆ ನೀಡಿದ ಅಧಿಕಾರ ಕಾನೂನಿಲ್ಲಿ ಗೊಂದಲವಿತ್ತು. ಕಾಂಗ್ರೆಸ್ ಮರಳು ನೀತಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿ ದುಬಾರಿ ದರಕ್ಕೂ ಕಾರಣವಾಯಿತು. ಈ ಎಲ್ಲಾ ಹುಳುಕನ್ನು ಮುಚ್ಚಿಟ್ಟು ಇದೀಗ ಆರೋಪ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಇದೀಗ ನಮ್ಮ ಸರಕಾರ ಮರಳು ಸಾಗಾಣೆ ಪರವಾನಿಗೆ ನೀಡುವ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಲಾಗಿದೆ. ಪರವಾನಿಗೆ ಹಂಚುವ ಕಾರ್ಯಕೈಗೆತ್ತಿಕೊಳ್ಳಲಾಗಿದೆ.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಮರಳು ಸಾಗಾಣಿಕೆಗೆ ಪರವಾನಿ ನೀಡುವ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆ ಇದ್ದ ಸರಕಾರ ಮರಳು ಸಾಗಾಣೆ ಪರವಾನಿಗೆ ನೀಡುವಲ್ಲಿ ಉಂಟಾದ ಗೊಂದಲಗಳಿಂದ ಈ ಸಮಸ್ಯೆಯಾಗಿದೆ.
ಇದೀಗ ಸ್ಪಷ್ಟ ಮರಳು ನೀತಿ ಜಾರಿಯಾಗುತ್ತಿದೆ.ಗೊಂದಲಗಳಿಗೆ ತೆರೆಬೀಳ ಬೀಳಲಿದೆ.ಮರಳು ತೆಗೆಯುವಲ್ಲಿ ಅಕ್ರಮ ಕಂಡು ಬಂದರೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss