Wednesday, July 6, 2022

Latest Posts

ಮರುಬಿಡುಗಡೆ ಆಗುತ್ತಿದೆ ಮೋದಿ ಬಯೋಪಿಕ್ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಹಳೆಯ ಚಿತ್ರಗಳ ಮರುಬಿಡುಗಡೆ ಆಗುತ್ತಿದೆ. ಇದೇ ತಂತ್ರವನ್ನು ಈಗ ಬಾಲಿವುಡ್ ಮಂದಿ ಸಹ ಅನುಕರಣೆ ಮಾಡಲು ಮುಂದಾಗಿದ್ದಾರೆ. ಅಕ್ಟೋಬರ್ 15ರಂದು ಚಿತ್ರಮಂದಿರಗಳು ತೆರೆಯುವ ಹಿನ್ನೆಲೆ ಹಳೆಯ ಚಿತ್ರಗಳನ್ನು ರಿ ರಿಲೀಸ್ ಮಾಡಲು ಬಾಲಿವುಡ್ ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಲಾಕ್‌ಡೌನ್ ಅವಧಿ ಮುಗಿದ ಬಳಿಕ ಹಿಂದಿಯಲ್ಲಿ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತು ಮೂಡಿ ಬಂದಿದ್ದ ”ಪಿಎಂ ನರೇಂದ್ರಮೋದಿ” ಸಿನಿಮಾ ಅಕ್ಟೋಬರ್ 15 ರಂದು ಮತ್ತೆ ಥಿಯೇಟರ್‌ಗೆ ಬರ್ತಿದೆ.
ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಹೊಸ ಪೋಸ್ಟರ್ ಸಹ ರಿಲೀಸ್ ಮಾಡಿದೆ. ಈ ಸುದ್ದಿಯನ್ನು ಬಿಟೌನ್ ಖ್ಯಾತ ಚಿತ್ರ ವಿಶ್ಲೇಶಕ ತರಣ್ ಆದರ್ಶ್ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss