Wednesday, August 17, 2022

Latest Posts

ಮರೆಯಾದ ಅಕ್ಷರ ಮಾಂತ್ರಿಕ: ಸಾವಿಗೂ ಮುನ್ನ ರವಿ ಬೆಳಗೆರೆ ಬರೆದಿದ್ದೇನು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ , ಅಕ್ಷರ ಮಾಂತ್ರಿಕ ಎಂದೇ ಖ್ಯಾತಿ ಪಡೆದ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ನಿನ್ನೆ(ಗುರುವಾರ) ತಡರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರ ಬರವಣಿಗೆಯನ್ನು ಮೆಚ್ಚಿಕೊಂಡ ಅದೆಷ್ಟೋ ಜನ ಕವಿ ಕಾಣದನ್ನೂ ಈ ರವಿ ಕಂಡಿದ್ದಾನೆ ಎಂದು ಕೊಂಡಾಡಿದ್ದಾರೆ.
ಬರೆವಣಿಗೆಯಲ್ಲಿಯೇ ಬದುಕು ಕಟ್ಟಿಕೊಂಡ ರವಿ ಬೆಳಗೆರೆ ಕೊನೆಯ ಕ್ಷಣದವರೆಗೂ ಬರೆಯುತ್ತಲೇ ಇದ್ದರೂ ಎನ್ನುವುದು ವಿಶೇಷ. ಅದ್ರಂತೆ, ರವಿ ಬೆಳೆಗೆರೆ ಅವರು ನಿನ್ನೆ ಬರೆದ ಕೊನೆಯ ಸಾಲುಗಳೇನು ಗೊತ್ತಾ?
ಹಲವು ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದ ರವಿ ಬೆಳಗೆರೆ ಅವರ “ಹಾಯ್ ಬೆಂಗಳೂರು” ಪತ್ರಿಕೆಯ “ಖಾಸ್ ಬಾತ್” ಅಂಕಣಕ್ಕಾಗಿನ ಅವರ ಕಡೆಯ ಸಾಲುಗಳು ಹೀಗಿದ್ದವು .  “ಮನಸ್ಸನ್ನು 40 ದಾಟದಂತೆ ನೋಡಿಕೊಳ್ಳುವುದರಲ್ಲಿ ಸುಖವಿದೆ. ಬರವಣಿಗೆ ಎಂಥಾವರನ್ನೂ ಒಳ್ಳೆಯವರನ್ನಾಗಿ ಮಾಡುತ್ತದಾ? ಕನಸು ಏಕಾಂತದಲ್ಲಿ ಹುಟ್ಟಬೇಕು, ಜನಜಂಗುಳಿಯಲ್ಲಿ ಬೆಳೆಯಬೇಕು.” ಎನ್ನುವ ಸಾಲುಗಳನ್ನು ಬರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!