ಮಲಬದ್ಧತೆ ಮಾಮೂಲಿ ಸಮಸ್ಯೆಯಾದರೂ ಕೆಲವೊಮ್ಮೆ ಅತಿರೇಕ ಆಗುತ್ತದೆ. ತಿಂದಿದ್ದು ಜೀರ್ಣವಾಗದೇ ಹಿಂಸೆ ಎನಿಸುತ್ತದೆ. ಇನ್ನು ಕೆಲವೊಮ್ಮೆ ಮಲದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದು ಮಲಬದ್ಧತೆ ಅಷ್ಟೇ ಅಲ್ಲ ಕ್ಯಾನ್ಸರ್ನ ಲಕ್ಷಣ ಕೂಡ. ಒಂದೆರಡು ದಿನದಲ್ಲಿ ಇದು ರಕ್ತ ನಿಲ್ಲದಿದ್ದರೆ ಪರೀಕ್ಷೆ ಮಾಡಿಸುವುದು ಲೇಸು. ಮಲದಲ್ಲಿ ರಕ್ತ ಏಕೆ ಬರುತ್ತದೆ ಗೊತ್ತಾ? ಅದರ ಲಕ್ಷಣಗಳೇನು ಗೊತ್ತೇ?
ಲಕ್ಷಣಗಳು ಹೀಗಿವೆ..
- ಹೊಟ್ಟೆ ಹಾಗೂ ಗುದನಾಳದಲ್ಲಿ ನೋವು
- ಕೆಂಪು,ಕಪ್ಪು ಬಣ್ಣದ ಮಲ ವಿಸರ್ಜನೆ
- ಮಲದಲ್ಲಿ ರಕ್ತ ಕಾಣುವುದು
- ಫ್ಲಶ್ ಮಾಡಿದಾಗ ಕೆಂಪು ಬಣ್ಣದ ನೀರಾಗಿರುವುದು
- ಯಾವಾಗಲೂ ಕನ್ಫೂಶನ್
- ತಲೆ ತಿರುಗುವುದು
ಇದಕ್ಕೆ ಏನು ಮಾಡಬೇಕು? - ದಿನಕ್ಕೆ10 ಕ್ಕಿಂತ ಹೆಚ್ಚು ಗ್ಲಾಸ್ ನೀರು ಕುಡಿಯಿರಿ
- ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ, ಇಂಟಿಮೇಟ್ ಏರಿಯಾಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ
- ಕಷ್ಟಪಟ್ಟು,ಒತ್ತಡ ಹಾಕಿ ಮಲವಿಸರ್ಜನೆ ಮಾಡಬೇಡಿ.
- ಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ
- ಟಾಯ್ಲೆಟ್ನಲ್ಲಿ ತುಂಬಾ ಹೊತ್ತು ಕೂರಬೇಡಿ
- ಇಂಟಿಮೇಟ್ ಏರಿಯಾದಲ್ಲಿ ನೋವಿದ್ದರೆ ಅಲ್ಲಿಗೆ ಐಸ್ ಹಚ್ಚಿ
- ಉಪ್ಪು ನೀರು ಹಾಕಿ ಅದರಲ್ಲಿ ಕುಳಿತುಕೊಳ್ಳಿ
- ಮದ್ಯಪಾನ ನಿಲ್ಲಿಸಿ