ಹಾಸನ: ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು,ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವತಿ ಜಲಾಶಯವು ಈ ಬಾರಿ ಭತಿ೯ಯಾಗುವ ಮುನ್ಸೂಚನೆ ಸಿಕ್ಕಿದೆ.
ಮೂಡಿಗೆರೆ,ಸಕಲೇಶಪುರದಲ್ಲಿ ಭಾರೀ ವಷ೯ಧಾರೆ ಹಿನ್ನಲೆಯಲ್ಲಿ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
2922 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಆ.6ಕ್ಕೆ 2906.29 ಅಡಿ ನೀರಿದೆ.
ಜಲಾಶಯದ ನೀರಿನ ಸಂಗ್ರಹ ಸಾಮ೯ಥ್ಯ ಗರಿಷ್ಠ 37.103 ಟಿಎಂಸಿ ಆಗಿದ್ದು,ಇಂದಿಗೆ 23.97 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆ ಹಿನ್ನಲೆಯಲ್ಲಿ ಒಳಹರಿವಿನ ಪ್ರಮಾಣ 36,849 ಕ್ಯೂಸೆಕ್ ಇದ್ದು,ಹೊರಹರಿವು 1400 ಕ್ಯೂಸೆಕ್ ಇದೆ.