Thursday, July 7, 2022

Latest Posts

ಮಲೆನಾಡಿನಲ್ಲಿ ಮಾಯವಾದ ಮಳೆ!

ಶಿವಮೊಗ್ಗ: ಜುಲೈ ಆರಂಭದಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಕಳೆದ ಎರಡು ದಿನಗಳಿಂದ ದಿಢೀರ್ ಮಾಯವಾಗಿದೆ.
ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಅಲ್ಪ ಪ್ರಮಾಣದ ಮಳೆ ಬಂದಿರುವುದು ಬಿಟ್ಟರೆ ಇನ್ನುಳಿದ ತಾಲೂಕುಗಳಲ್ಲಿ ಹನಿ‌ ಮಳೆಯೂ ಬಂದಿಲ್ಲ.
ಮಳೆ ಕಡಿಮೆ ಆಗಿರುವುದರಿಂದ ಜಲಾಶಯಗಳಿಗೆ ಒಳಹರಿವು ಕೂಡಾ ಕಡಿಮೆ ಆಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 6642 ಕ್ಯೂಸೆಕ್ಸ್ ಒಳ ಹರಿವಿದ್ದು, ಜಲಾಶಯ ಮಟ್ಟ 1765.65 ಅಡಿಗೆ ತಲುಪಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ 6919 ಕ್ಯೂಸೆಕ್ಸ್ , ಭದ್ರಾ ಜಲಾಶಯಕ್ಕೆ 3121 ಕ್ಯೂಸೆಕ್ಸ್ ಒಳ ಹರಿವಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss