Sunday, August 14, 2022

Latest Posts

ಮಲೆನಾಡಿನ ಕುಸಿತ ತಡೆಗಟ್ಟಲು ವೈಜ್ಞಾನಿಕ ವಿಶ್ಲೇಷಣೆ: ಮೂರು ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಕೆ

ಮಡಿಕೇರಿ: ಮಲೆನಾಡಿನಲ್ಲಿ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡುಕೊಳ್ಳಲು ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷ ಅನಂತಹೆಗಡೆ ಅಶೀಸರ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವರಕಾಡು ಹಾಗೂ ನೈಸರ್ಗಿಕ ಅರಣ್ಯಗಳಲ್ಲಿ ಭೂಕುಸಿತ ಪ್ರಮಾಣ ಇಲ್ಲ. ಮಾನವ ಹಸ್ತಕ್ಷೇಪ ಇರುವಲ್ಲಿ ಮಾತ್ರ ಭೂಕುಸಿತ ಉಂಟಾಗಿದೆ.ಇವುಗಳನ್ನು ತಡೆಯುವ ಬಗ್ಗೆ ವಿವಿಧ ಇಲಾಖಾಧಿಕಾರಿಗಳು, ತಜ್ಞರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಮೋಡ ಬಿತ್ತನೆಗೂ ವಿಕೋಪಕ್ಕೂ ಸಂಬಂಧವಿಲ್ಲ: ಕೊಡಗಿನ ಕಾಡುಗಳು ರಕ್ಷಣೆಯಾದಲ್ಲಿ ಇಲ್ಲಿನ ಜನತೆಯ ಜೀವ ಕೂಡ ರಕ್ಷಿಸಲ್ಪಡುತ್ತದೆ. ಕೃತಕ ಮೋಡ ಬಿತ್ತನೆಗೂ ಪ್ರಾಕೃತಿಕ ವಿಕೋಪಕ್ಕೂ ಸಂಬಂಧವಿಲ್ಲ. ಪ್ರಕೃತಿ ನಾಶವಾಗದಂತೆ ಮಾನವನ ಹಸ್ತಕ್ಷೇಪ ಪ್ರಕೃತಿಯ ಮೇಲೆ ಹೆಚ್ಚಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದೇವೆ ಎಂದು ತಿಳಿಸಿದರು. ರಾಜ್ಯ ಪ್ರಾಕತಿಕ ವಿಕೋಪ ನಿರ್ವಹಣಾ ಘಟಕದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು, ಕಳೆದ ಸಾಲಿನಲ್ಲಿ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿರಲಿಲ್ಲ . ಪ್ರಸಕ್ತ ಸಾಲಿನಲ್ಲೂ ಜುಲೈ ಮತ್ತು ಆಗಸ್ಟ್‌ನಲ್ಲಿ ಕೊಡಗಿನಲ್ಲಿ ಅತೀ ಹೆಚ್ಚು ಮಳೆ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss