ಮಲೆನಾಡಿನ ತಾಲಿಪಟ್ಟು ತಿಂದಿದ್ದೀರಾ? ಇದನ್ನು ಮಸಾಲಾ ರೊಟ್ಟಿ ಎಂದೂ ಅನ್ನುತ್ತಾರೆ. ಆದರೆ ಇದು ಮಲೆನಾಡಿದ ರುಚಿಕರ ತಿಂಡಿ. ಇದು ಬಹಳ ಟೇಸ್ಟಿ ಆಹಾರ. ಬರೀ ಅಕ್ಕಿ ರೊಟ್ಟಿ ತಿನ್ನುವ ಬದಲು ಈ ರೀತಿ ಮಾಡಿದರೆ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗೆ ಮಾಡಿ ರುಚಿಕರ ತಾಲಿಪಟ್ಟು.
- ಬೇಕಾಗುವ ಸಾಮಾಗ್ರಿಗಳು
- ಅಕ್ಕಿ ಹಿಟ್ಟು- 1 ಬೌಲ್
- ಈರುಳ್ಳಿ- ಸಣ್ಣಗೆ ಕತ್ತರಿಸಿದ್ದು 1
- ಹಸಿಮೆಣಸು- 4
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಕರಿಬೇವು- ಸ್ವಲ್ಪ
- ಸಬ್ಬಸಿಗೆ-1 ಕಟ್ಟು
- ಓಂ ಕಾಳು- ಒಂದು ಸ್ಪೂನ್
- ಉಪ್ಪು- 1 ಚಮಚ
- ಅರಿಶಿಣ- ಬೇಕಾದರೆ
- ಮಾಡುವ ವಿಧಾನ
- ಮೊದಲಿಗೆ ಅಕ್ಕಿ ಹಿಟ್ಟಿಗೆ ಮೇಲೆ ನಮೂದಿಸಿದ ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ನೀರು ಮಿಕ್ಸ್ ಮಾಡಿಕೊಳ್ಳಿ.
- ಈ ಮಿಶ್ರಣವನ್ನು ಸ್ವಲ್ಪ ಹೊತ್ತು ಬಿಟ್ಟು ಎಣ್ಣೆ ಹಾಕಿ ಲಟ್ಟಿಸಿ.
- ನಂತರ ಎಣ್ಣೆ ಹಾಕಿ ಬೇಯಿಸಿದರೆ ತಾಲಿಪಟ್ಟು ರೆಡಿ.
- ಇದಕ್ಕೆ ತುಪ್ಪ, ಚಟ್ನಿ ಹಾಕಿಕೊಂಡು ತಿಂದರೆ ರುಚಿ ಇನ್ನೂ ಚೆನ್ನಾಗಿರುತ್ತದೆ.