ಮಲೆನಾಡಿನಲ್ಲಿ ಧೋ ಮಳೆಗಾಲ ಶುರುವಾಗುತ್ತಿದ್ದಂತೆಯೇ ವಾರಕ್ಕೆ ಮೂರು ದಿನವಾದರೂ ಕರ್ಕ್ಲಿ ಮಾಡುತ್ತಾರೆ. ಕರ್ಕ್ಲಿ ಬಸಳೇ ಸೊಪ್ಪಿನಿಂದ ಮಾತ್ರವಲ್ಲ. ಗೋಳಿ ಸೊಪ್ಪು, ಕೆಸುವಿನ ಸೊಪ್ಪಿನಿಂದಲೂ ತಯಾರಿಸುತ್ತಾರೆ. ಇದು ಅನ್ನದ ಜೊತೆ, ದೋಸೆ ಜೊತೆ ಸೇವಿಸಬಹುದು. ಹೇಗೆ ಮಡುವುದು ಎಂದು ಇಲ್ಲಿದೆ ಓದಿ..
ಬೇಕಾಗುವ ಸಾಮಗ್ರಿ:
ಬಸಲೆ ಸೊಪ್ಪು,
ಲಿಂಬು,
ಬೆಳ್ಳುಳ್ಳಿ,
ಹಸಿ ಮೆಣಸು.
ಕಾಯಿತುರಿ,
ಸಾಸಿವೆ,
ಎಣ್ಣೆ,
ಇಂಗು,
ಉಪ್ಪು
ಮಾಡುವ ವಿಧಾನ:
ಮೊದಲು ಬಸಳೆ ಸೊಪ್ಪನ್ನು ಉಪ್ಪು, ಹುಳಿಪುಡಿ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ, ಅದು ಚೆನ್ನಾಗಿ ಮಡ್ಡಿ ರೀತಿಯಲ್ಲಿ ಬೆಂದಿರಬೇಕು,
ನಂತರ ಎರಡು ಚಮಚದಷ್ಟು ಕಾಯಿತುರಿ, ಎಣ್ಣೆಯಲ್ಲಿ ಹುರಿದುಕೊಂಡ ಹಸಿ ಮೆಣಸು ಖಾರ ಹೆಚ್ಚಿರಬೇಕು. ೧೦ ಎಸಳು ಬೆಳ್ಳುಳ್ಳಿ. ಇವಷ್ಟನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಬೇಯಿಸಿ ಇಟ್ಟುಕೊಂಡ ಬಸಳೆಸೊಪ್ಪಿನ ಮಡ್ಡಿಗೆ ಹಾಕಬೇಕು. ನಂತರ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು. ಅದು ಬಿಸಿ ಆದ ಮೇಲೆ ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಮತ್ತೊಂದು ಸ್ವಲ್ಪ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಬೇಕು. ನಂತರ ಕಕ್ಲಿ ತಣ್ಣಗಾದ ಮೇಲೆ ಲಿಂಬು ರಸ ಹಾಕಬೇಕು, ಉಪ್ಪು ರುಚಿಗೆ ತಕ್ಕಷ್ಟು ಹಾಕಿದರೆ ಕರ್ಕ್ಲಿ ರೆಡಿ. ಇದನ್ನು ದೋಸೆ ಜೊತೆ, ಅನ್ನದ ಜೊತೆ ಕೂಡ ಸೇವಿಸಬಹುದು.