Thursday, August 11, 2022

Latest Posts

ಮಲೇಷ್ಯಾದಲ್ಲಿ ‘ಕೊರೋನಾ ತುರ್ತುಪರಿಸ್ಥಿತಿ’ ಘೋಷಣೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ಹಿನ್ನೆಲೆ ಮಲೇಷ್ಯಾದಲ್ಲಿ ತುರ್ತುಪರಿಸ್ಥಿತಿ ಘೋಷಣೆಗೆ ಅಲ್ಲಿನ ರಾಜ ಅಂಗೀಕಾರ ನೀಡಿದ್ದಾರೆ.
ಈ ಮೂಲಕ ಆಗಸ್ಟ್‌ವರೆಗೆ ಸಂಸತ್‌ ಅನ್ನು ಅಮಾನತಿನಲ್ಲಿಡಲಾಗುವುದ್ದು, ಇದರ ಜೊತೆಗೆ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ಮೊಹಿದ್ದೀನ್‌, ಈಗ ಘೋಷಿಸಿರುವ ತುರ್ತು ಪರಿಸ್ಥಿತಿ ಯಾವುದೇ ಸೇನಾ ದಂಗೆಯಲ್ಲ. ಈಗ ದೇಶದಲ್ಲಿ ಕರ್ಫ್ಯೂ ವಿ‌ಧಿಸುವುದಿಲ್ಲ ಎಂದು ಮಲೇಷ್ಯಾ ನಾಗರಿಕರಿಗೆ ಭರವಸೆ ನೀಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸರ್ಕಾರ ಉಸ್ತುವಾರಿಯಾಗಿ ದೇಶವನ್ನು ಮುನ್ನಡೆಸಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss