Tuesday, June 28, 2022

Latest Posts

ಮಲ್ಯಗೆ ಬಿಗ್ ರಿಲೀಫ್: ದಿವಾಳಿ ಅರ್ಜಿ ಮುಂದೂಡಿದ ಲಂಡನ್ ಹೈ ಕೋರ್ಟ್

ಲಂಡನ್: ಮದ್ಯದೊರೆ ವಿಜಯ್ ಮಲ್ಯ ವಿರುದ್ಧ, ಎಸ್.ಬಿ.ಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ಮನವಿ ಮೇರೆಗೆ ಲಂಡನ್ ಹೈ ಕೋರ್ಟ್ ದಿವಾಳಿ ಆದೇಶದ ವಿಚಾರಣೆಯನ್ನು ಕನಿಷ್ಠ 6 ತಿಂಗಳವರೆಗೆ ಮುಂದೂಡಿದೆ.

ಲಂಡನ್ ಹೈ ಕೋರ್ಟ್ ನ ನ್ಯಾಯಧೀಶರಾದ ಮೈಕಲ್ ಬ್ರಿಗ್ಸ್ ಅವರು ವಿಜಯ್ ಮಲ್ಯಾ ಕುರಿತಾಗಿ ಭಾರತದ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈ ಕೋರ್ಟ್ ನಲ್ಲಿ ಇತ್ಯರ್ಥದ ಪ್ರಸ್ತಾಪ ಮಾಡುವವರಗೆ ಮಲ್ಯಗೆ ಸಾಲ ತೀರಿಸಲು ಕಾಲಾವಕಾಶ ನೀಡಲಾಗುವುದೆಂದು ತೀರ್ಪು ನೀಡಿದರು. ಈ ಸಮಯದಲ್ಲಿ ಈ ರೀತಿಯಾದ ಕ್ರಮ  ಕೈಗೊಳ್ಳುವುದರಿಂದ ಬ್ಯಾಂಕ್ ಗಳಿಗೆ ಯಾವುದೇ ಸ್ಪಷ್ಟ ಉಪಯೋಗವಿಲ್ಲ ಎಂದು ಹೇಳಿದರು.

ಕಿಂಗ್ ಫಿಶರ್ ಏರ್ ಲೈನ್ಸ್ ಪಡೆದ 1.05(9,920 ಕೋಟಿ ರೂ.) ಬಿಲಿಯನ್ ಸಾಲಕ್ಕೆ ವಿಜಯ್ ಮಲ್ಯ ತಮ್ಮ ಸ್ವಂತ ವೈಯಕ್ತಿಕ ಗ್ಯಾರಂಟೀ ನೀಡಿದ್ದರು. ಈ ಕುರಿತು ಕರ್ನಾಟಕ ನ್ಯಾಯಮಂಡಳಿ ದಿವಾಳಿತನದ ಅರ್ಜಿ ಸಲ್ಲಿಸಿತ್ತು. ನವೆಂಬರ್ 24 2017ರಲ್ಲಿ ಈ ತೀರ್ಪನ್ನು ಇಂಗ್ಲೆಂಡ್ ನೋಂದಾಯಿಸಿಕೊಂಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss