ಮಳವಳ್ಳಿ: ಬುಯ್ಯನದೊಡ್ಡಿ ಸಮೀಪ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಶೇಖರ್(20) ಮೃತಪಟ್ಟ ದುರ್ದೈವಿ
ಕನಕಪುರ ಸಮೀಪ ಇರುವ ತೋಕ ಸಂದ್ರ ಗ್ರಾಮದ ವಾಸಿ ನಾಗರಾಜ ಎಂಬುವರ ಮಗ ಶೇಖರ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ತನ್ನ 4 ಜನ ಸ್ನೇಹಿತರೊಡನೆ ಬುಯ್ಯನದೊಡ್ಡಿ ಗ್ರಾಮಕ್ಕೆ ಬಂದಿದ್ದು ವಾಪಸು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ತಿರುವಿನಲ್ಲಿ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಶೇಖರ ಗಾಯಗೊಂಡ ಆತನನ್ನು ತಕ್ಷಣ ಹಲಗೂರಿನ ಆಸ್ಪತ್ರೆಗೆ ಕರೆತರಲಾಯಿತು ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿರುತ್ತಾನೆ ಹಲಗೂರು ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.