ಮಳವಳ್ಳಿ:ಸರ್ವಜನಾಂಗವು ಭೇದ-ಬಾವವಿಲ್ಲದೆ ಶಾಂತಿ-ನೆಮ್ಮದಿಯಿಂದ ಬಾಳಿ ಬದುಕುವುದಕ್ಕೆ ಶ್ರೀ ರಾಮಚಂದ್ರ ಆಶೀರ್ವದಿಸಲು ಪ್ರಾರ್ಥಿಸುತ್ತೇವೆ. ನಮ್ಮ ದೇಶ ‘ರಾಮರಾಜ್ಯ’ ದ ಮಾದರಿಯಾಗಿ ನಡೆಸಲಿ ಎಂದು ಮಾಜಿ ಪುರಸಭಾದ್ಯಕ್ಷ ದೊಡ್ಡಯ್ಯ ತಿಳಿಸಿದರು.
ಪಟ್ಟಣದ ಗಂಗಾಮತಸ್ಥರ ಬೀದಿಯ ಅಡ್ಡೇ-ನಿಂಗಯ್ಯನ ಕೇರಿಯಲ್ಲಿರುವ ಪುರಾತನಕಾಲದ ಶ್ರೀ ಸಿದ್ದಪ್ಪಾಜಿ ಶ್ರೀ ಸೀತಾರಾಮಮಂದಿರದಲ್ಲಿ ಶ್ರೀ ರಾಮರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಪೂಜೆ ನಡೆಸಿ ಮಾತನಾಡಿ ಶ್ರೀ ರಾಮರು ಭರತಖಂಡ ಚಕ್ರವರ್ತಿಯಾಗಿ ಆಡಳಿತ ನಡೆಸಿ ರಾಮರಾಜ್ಯದ
ಆದರ್ಶ ಪುರುಷರಾಗಿ ರೂಪಗೊಂಡ್ಡಿದ್ದಾರೆ ಇವರ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಿಸುತ್ತಿರುವುದು ಸಂತೋಷವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಯಜಮಾನ್ ವೆಂಕಟೇಶ್, ಭಜನೆ ಮಂಡಲಿಯ ಎಂ.ಎಚ್.ಶ್ರೀಕಂಠಯ್ಯ, ಎಂ.ಕೆ.ಶಿವಣ್ಣ, ರಮೇಶ್, ಉಂತೂರ ಶಿವಕುಮಾರ್, ಜವರೇ ಮಾದಯ್ಯ ಮುಂತಾದವರು ಉಪಸ್ಥಿತರಿದ್ದರು.