ಮಳವಳ್ಳಿ: ಮನೆ ನಿರ್ಮಿಸಲು ವಸತಿ ನಕ್ಷೆ ಮಂಜೂರಾತಿಕ್ಕಾಗಿ 35 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಪಟ್ಟಣದ ಯೋಜನಾ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ್ ಮಂಗಳವಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಾದಪ್ಪ ಎನ್ನುವವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಶ್ರೀನಿವಾಸï ಅವರನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರ ಮಾದಪ್ಪ ಪಟ್ಟಣದ ಸರ್ವೆ ನಂ.66/2ಬಿಯಲ್ಲಿ 17 ಗುಂಟೆ ನಿವೇಶನ ಹೊಂದಿದ್ದರು. ಅಲ್ಲಿ ಮನೆ ನಿರ್ಮಿಸಿಕೊಳ್ಳಲು ಯೋಜನಾ ಪ್ರಾಧಿಕಾರದಲ್ಲಿ ನಕ್ಷೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದರು. ಆದರೆ ನಕ್ಷೆ ಮಂಜೂರಾತಿ ಮಾಡದೇ ಯೋಜನಾ ವಿಳಂಬ ಧೋರಣೆ ಅನುಸರಿಸಿತ್ತು.
ಹೀಗಾಗಿ ನಕ್ಷೆ ಮಂಜೂರಾತಿ ಮಾಡುವಂತೆ ಯೋಜನಾ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸï ಬಳಿ ಮನವಿ ಮಾಡಿದರು. ಈ ವೇಳೆ ಶ್ರೀನಿವಾಸï 75 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು. ದೂರುದಾರ ಮಾದಪ್ಪ ಸದ್ಯಕ್ಕೆ 35 ಸಾವಿರ ರೂ. ಕೊಡುತೇನೆ ಉಳಿದ ಹಣವನ್ನು ಹಂತ ಹಂತವಾಗಿ ನೀಡುವುದಾಗಿ ಹೇಳಿದರು. ಈ ಮಾಹಿತಿಯನ್ನು ದೂರುದಾರ ಮಾದಪ್ಪ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದರಂತೆ ಮಂಗಳವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದ ಬಳಿ 35 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ ಶ್ರೀನಿವಾಸ ಅವರನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಎಸ್ಪಿ ರಶ್ಮಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಸತೀಶï, ರವಿಶಂಕರï, ಸಿಬ್ಬಂದಿಗಳಾದ ವೆಂಕಟೇಶï, ಪಾಪಣ್ಣ, ಕುಮಾರ, ಮಹದೇವು, ಮಹೇಶï, ಲಿಂಗರಾಜು, ದೇವರಾಜು ಇತರರು ಇದ್ದರು.