ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರಕ್ಕೆ ಪ್ರಾಮುಖ್ಯತೆ. ಬಿಸಿ ಬೋಂಡಾ, ಗೋಬಿ, ಫ್ರೈಡ್ರೈಸ್, ಹುರಿದ ಬೇಯಿಸಿದ ಶೇಂಗಾ, ಜೋಳಾ ಹೀಗೆ ಎಲ್ಲವನ್ನೂ ತಿನ್ನುತ್ತೇವೆ. ಸೂಪ್ಗಳಿಗೂ ಮಳೆಗಾಲ ಹೇಳು ಮಾಡಿಸಿದಂತಿರುತ್ತದೆ. ಹೊರಗೆ ಮಳೆ ಸದ್ದು,ಮಣ್ಣಿನ ಘಮ ನಿಮ್ಮನೆಚ್ಚಿನ ಸಿನಿಮಾ ಕೈಯಲ್ಲಿ ಸೂಪ್ ಇದ್ದರೆ.. ಆಹಾ ನೆನೆಸಿಕೊಳ್ಳುವುದಕ್ಕೆ ಹಿತ. ಈ ಕಾಲದಲ್ಲಿ ಹೆಚ್ಚು ಜನರಿಗೆ ಆರೋಗ್ಯ ಕೆಡುತ್ತದೆ. ಶೀತ,ನೆಗಡಿ ತಲೆನೋವು ಮಾಮೂಲಿ. ಈ ರೀತಿ ಇದ್ದಾಗ ಆಹಾರ ಸೇವಿಸಲು ಕಷ್ಟವಾದರೆ ಸೂಪ್ ಕುಡಿಯಬಹುದು. ಬನ್ನಿ ಹಾಗಿದ್ದರೆ ಕಾರ್ನ್ ಸೂಪ್ ಮಾಡುವುದು ಹೇಗೆ ನೋಡೋಣ..
ಹಂತ1 : ಕ್ಯಾರೆಟ್,ಬೀನ್ಸ್,ಬಟಾಣಿ,ಸ್ಪ್ರಿಂಗ್ ಆನಿಯನ್, ಸ್ವೀಟ್ ಕಾರ್ನ್ ಕಾಳುಗಳು, ಸ್ವಲ್ಪ ಆಲೂಗಡ್ಡೆ ಶುಂಠಿ, ಬೆಳ್ಳುಳ್ಳಿ ಇವನ್ನು ಕತ್ತರಿಸಿ ಇಟ್ಟುಕೊಳ್ಳಿ
ಹಂತ 2 : ಪಾತ್ರೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಶುಂಠಿ ಬೆಳ್ಳುಳ್ಳಿ ಹಾಕಿ
ಹಂತ 3: ನಂತರ ಎಲ್ಲ ತರಕಾರಿಯನ್ನು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿ
ಹಂತ 4: ನೀರು ಹಾಕಿ ತರಕಾರಿ ಸ್ವಲ್ಪ ಬೇಯುವವರೆಗೆ ಕಾಯಿರಿ
ಹಂತ 5: ಇದಕ್ಕೆ ಉಪ್ಪು,ಸಕ್ಕರೆ, ಸ್ವಲ್ಪ ಕಾಳುಮೆಣಸು ಪುಡಿ ಜಾಕಿ
ಹಂತ 6: ನಂತರ ಬೌಲ್ಗೆ ಹಾಕಿ ಇದಕ್ಕೆ ವಿನೇಗರ್ ಚಿಲ್ಲಿ ಸಾಸ್ ಬೇಕೆಂದರೆ ಹಾಕಬಹುದು.