ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳಬೇಕೆ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ..

ಇನ್ನೇನು ಮಳೆಗಾಲ ಶುರುವಾಗಿದೆ. ಮಳೆಯಲ್ಲಿ ನೆನೆಯಲು ಯಾರಿಗೆ ಇಷ್ಟವಾಗುವುದಿಲ್ಲ. ಹೊರಗೆ ಹೋಗುವಂತಿಲ್ಲ ಎಂದಾದರೆ ಮನೆಯ ಮಹಡಿಯ ಮೇಲಾದರೂ ನಿಂತು ಮಳೆಯನ್ನು ಅನುಭವಿಸೋಣ ಎನಿಸುತ್ತದೆ. ಆದರೆ ಮಳೆಯಲ್ಲಿ ನೆನೆಯುವ ಭರದಲ್ಲಿ ನಮ್ಮ ಕೂದಲ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ. ಒದ್ದೆ ಕೂದಲ ಆರೈಕೆ ಮಾಡುವುದಿಲ್ಲ. ಹಾಗಾಗಿಯೇ ಮಳೆಗಾಲದಲ್ಲಿ ಹೆಚ್ಚು ಕೂದಲು ಉದುರುತ್ತದೆ. ಆದರೆ ನಿಮ್ಮ ಕೂದಲ ಆರೈಕೆ ಬಗ್ಗೆ ನಾವು ಹೇಳುವ ಟಿಪ್ಸ್‌ಗಳನ್ನು ಅನುಸರಿಸಿದರೆ ಕೂದಲು ಉದುರುವಿಕೆ ತಡೆಗಟ್ಟಬಹುದು ಹಾಗೂ ಸುರಕ್ಷತೆ ಕಾಪಾಡಿಕೊಳ್ಳಬಹುದು.

  • ಮಳೆಯಲ್ಲಿ ನೆನೆದು ಬಂದ ನಂತರ ತಲೆಸ್ನಾನ ಮಾಡಿ. ಕೂದರು ಒಣಗಿಸಿಕೊಂಡು ಸುಮ್ಮನಾಗಬೇಡಿ. ಆ ಒದ್ದೆ ಕೂದಲಿಗೆ ತಲೆಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲ, ತುರಿಸುವುದಿಲ್ಲ ಹಾಗೂ ಹೊಟ್ಟು ಆಗುವುದಿಲ್ಲ.
  • ಮಳೆಗಾಲದಲ್ಲಿ ಆದಷ್ಟು ಕಡಿಮೆ ತಲೆಸ್ನಾನ ಮಾಡಿ, ವಾರಕ್ಕೆ ಎರಡು ಬಾರಿ ಮಾಡಿದರೆ ಒಳಿತು. ಕೂದಲ ಬುಡ ಈ ಕಾಲದಲ್ಲಿ ದುರ್ಬಲವಾಗಿರುತ್ತದೆ. ಹಾಗಾಗಿ ಕಡಿಮೆ ತಲೆಸ್ನಾನ ಮಾಡಿ ಹಾಗೂ ಚೆನ್ನಾಗಿ ಒಣಗಿಸಿ.
  • ಒದ್ದೆ ಕೂದಲು ಬಾಚಬೇಡಿ. ತಲೆಸ್ನಾನ ಮಾಡಿ ಹಸಿ ಕೂದಲು ಬಾಚುವ ಅಭ್ಯಾಸ ಹಲವರಿಗಿದೆ. ಆದರೆ ಹಾಗೆ ಮಾಡಿದರೆ ಕೂದಲು ಒಡೆಯುತ್ತದೆ. ಉದುರುತ್ತದೆ. ಕೂದಲ ಬುಡ ಹಸಿಯಾಗಿದ್ದಾಗ ದುರ್ಬಲವಾಗಿರುತ್ತದೆ.ಆ ಸಮಯದಲ್ಲಿ ಬಲ ಹಾಖಿ ತಲೆಬಾಚಿದಾಗ, ಕೂದಲು ಬುಡ ಸಮೇತ ಕೈಗೆ ಬರುತ್ತದೆ.
  • ಎಣ್ಣೆ ಹಚ್ಚಿದ ತಲೆಕೂದಲನ್ನು ಮಳೆಗೆ ನೆನೆಸಬೇಡಿ. ಈ ರೀತಿ ಮಾಡಿದರೆ ಹೊಟ್ಟಾಗುತ್ತದೆ. ಅದರಿಂದ ಕೂದಲು ಉದುರುತ್ತದೆ. ಕೂದಲು ಸದೃಢತೆ ಕಳೆದುಕೊಳ್ಳುತ್ತದೆ.
  • ನೀವು ಶ್ಯಾಂಪೂ ಅಥವಾ ಕಂಡೀಷನರ್ ಬದಲಾಯಿಸಬೇಕು ಎಂದುಕೊಂಡಿದ್ದರೆ ಅದಕ್ಕೆ ಮಳೆಗಾಲ ಖಂಡಿತ ಸೂಕ್ತವಲ್ಲ. ಈ ಸಮಯದಲ್ಲಿ ಸೂರ್ಯನ ಕಿರಣಗಳು ನಮ್ಮ ಕೂದಲು ತಾಕುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಶಾಂಪೂ ಬದಲಾವಣೆ ಬೇಡ.
  • ಮಳೆಗಾಲದಲ್ಲಿ ಕೂದಲು ಒಣಗಿಸಲು ಸಮಯವಿಲ್ಲ ಎಂದು ಬ್ಲೋ ಡ್ರೈಯರ್ ಬಳಸುತ್ತಾರೆ. ಆದರೆ ಕೂದಲು ನೈಸರ್ಗಿಕವಾಗಿ ಒಣಗಬೇಕು. ಆರ್ಟಿಫಿಯಲ್ ಸೋರ‍್ಸ್‌ಗಳನ್ನು ಬಳಸಿ ಕೂದಲು ಒಣಗಿಸಿದರೆ, ಕೂದಲಿಗೆ ಸ್ಲ್ಪಿಟ್ಸ್ ಆಗುತ್ತದೆ. ಕೂದಲ ತುದಿ ಒರಟಾಗುತ್ತದೆ.
  • ನೀವು ಕಂಡೀಶನರ್ ಬಳಸುವುದಿಲ್ಲವೆ? ಬೇರೆ ಯಾವ ಕಾಲದಲ್ಲಿ ಬಳಸದಿದ್ದರೂ ಪರವಾಗಿಲ್ಲ. ಮಳೆಗಾಲದಲ್ಲಿ ಕಂಡೀಶನರ್ ಬಳಸಿ, ಈ ಸಮಯ ನಿಮ್ಮ ಕೂದಲಿಗೆ ಕಂಡೀಶನ್ ಅಗತ್ಯ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss