Sunday, August 14, 2022

Latest Posts

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು ಮಕ್ಕಳಿಗೂ ಇದು ಇಷ್ಟವಾಗುವಂತದ್ದು. ಮಾಡುವುದು ಹೇಗೆಂದು ಈ ಕೆಳಗಿದೆ ನೋಡಿ…

ಬೇಕಾಗುವ ಸಾಮಗ್ರಿ:
ಕ್ಯಾರೆಟ್
ತುಪ್ಪ
ಹಾಲು
ಸಕ್ಕರೆ
ಡ್ರೈ ಫ್ರೂಟ್ಸ್

ಮಾಡುವ ವಿಧಾನ:
ಮೊದಲಿಗೆ ಕ್ಯಾರೆಟ್ ತುರಿದುಕೊಳ್ಳಿ, ನಂತರ ಅದನ್ನು ತುಪ್ಪದಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಿ. ಅದು ಬಾಡುತ್ತಿದ್ದಂತೆಯೇ ನೀರು ಬಿಡುತ್ತದೆ. ಹಾಗೆಯೇ ಕ್ಯಾರೆಟ್ ತಣ್ಣಗಾದ ಮೇಲೆ ಇದನ್ನು ಮಿಕ್ಸಿಯಲ್ಲಿ ಹಾಲು, ಸಕ್ಕರೆ ಹಾಕಿ ರುಬ್ಬಿ. ನಂತರ ತುಪ್ಪದಲ್ಲಿ ಡ್ರೈ ಫ್ರೂಟ್ಸ್ ಹುರಿದುಕೊಂಡು ಬೀಸಿಕೊಂಡ ಮಿಶ್ರಣಕ್ಕೆ ಹಾಕಿ. ಬಿಸಿ ಮಾಡಿಕೊಂಡು ಕುಡಿಯಬಹುದು ಇಲ್ಲವಾದಲ್ಲಿ ಫ್ರಿಜ್‌ನಲ್ಲಿ ಇಟ್ಟು ತಣ್ಣಗಾದ ಮೇಲೂ ಕುಡಿಯಬಹುದು. ಮಳೆಗಾಲದಲ್ಲಿ ಇದು ರುಚಿ ಎನಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss