ಮಡಿಕೇರಿ: ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿರುವ ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲ ಆರಂಭಕ್ಕೆ ಮುನ್ನವೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇದರ ಅಂಗವಾಗಿ ಎನ್ಡಿಆರ್ಎಫ್ನ ತುಕಡಿಯೂ ಜಿಲ್ಲೆಗೆ ಬಂದಿಳಿದಿದೆ.
ಜಿಲ್ಲಾಡಳಿತದ ಕೋರಿಕೆ ಮೇರೆಗೆ ಎನ್ಡಿಆರ್ಎಫ್ನ 10ನೇ ಬೆಟಾಲಿಯನ್ನ 25 ಮಂದಿಯ ತಂಡ ಮಂಗಳವಾರ ನಗರಕ್ಕೆ ಆಗಮಿಸಿದ್ದು, ಇಲ್ಲಿನ ಪೊಲೀಸ್ ಸಮುದಾಯ ಭವನ ‘ಮೈತ್ರಿ’ಯಲ್ಲಿ ಬೀಡುಬಿಟ್ಟಿದೆ.
ಇಂಫಾನ್ ಚಂಡಮಾರುತಕ್ಕೆ ಸಂಬAಧಿಸಿದ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಆಂಧ್ರಪ್ರದೇಶದಿAದ ಜಿಲ್ಲೆಗೆ ಆಗಮಿಸಿರುವ ತಂಡದ ನಾಯಕತ್ವವನ್ನು ಕಮಾಂಡಿAಗ್ ಆಫೀಸರ್ ಆರ್.ಕೆ. ಉಪಾಧ್ಯಾಯ ಅವರು ವಹಿಸಿಕೊಂಡಿದ್ದು, ಮಳೆಗಾಲ ಕೊನೆಯಾಗುವವರೆಗೂ ಎನ್ಡಿಆರ್ಎಫ್ ತಂಡ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹ, ಕಟ್ಟಡ ಧ್ವಂಸ ಮತ್ತಿತರ ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಮುಂದಾಗಲಿದೆ.