ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಟಿಸಿರುವ ಚಿತ್ರ ಸಲಗ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರ ಪ್ರೇಕ್ಷಕರ ಎದುರುಗೊಳ್ಳಬೇಕಿತ್ತು. ಆದರೆ ಕೊರೋನಾ ಹಾವಳಿಯಿಂದ ಲಾಕ್ಡೌನ್ ಆಗಿತ್ತು. ಹೀಗಾಗಿ ಚಿತ್ರೀಕರಣಕ್ಕೆ ಸ್ವಲ್ಪ ಬ್ರೇಕ್ ಬಿದ್ದಿತ್ತು. ಅನ್ಲಾಕ್ ಆದರೂ ಕೂಡ ಕೊರೋನಾ ವೈರಸ್ ಇನ್ನೂ ಕಡಿಮೆ ಆಗಿಲ್ಲ. ಅದನ್ನು ಲೆಕ್ಕಿಸಿದೆ ಚಿತ್ರತಂಡ ಚಿತ್ರೀಕರಣಕ್ಕೆ ಭಾಗಿಯಾಗಿತ್ತು. ಈ ಚಿತ್ರದ ಸೂರಿ ಅಣ್ಣ ಎಂಬ ಹಾಡು ರಿಲೀಸ್ ಆಗಿದ್ದು, ಸಖತ್ ಹಿಟ್ ನೀಡಿತ್ತು.
ಈಗ ಸಖತ್ ರೊಮ್ಯಾಂಟಿಕ್ ಸಾಂಗ್ವೊಂದನ್ನು ಬಿಡುಗಡೆ ಮಾಡುವುದಕ್ಕೆ ’ಸಲಗ’ ಬಳಗ ನಿರ್ಧಾರ ಮಾಡಿದೆ. ಈಗ ರಿಲೀಸ್ ಮಾಡಲಿರುವ ’ಮಳೆಯೇ ಮಳೆಯೇ..’ ಹಾಡನ್ನು ಈಚೆಗಷ್ಟೇ ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಆತಂಕದ ನಡುವೆಯೇ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುಂದರ ತಾಣಗಳಲ್ಲಿ ‘ಭಾರಿ ಮಳೆಯ ನಡುವೆಯೇ ಚಿತ್ರೀಕರಣ ಮಾಡಲಾಗಿದೆ.ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಿ ಶೂಟಿಂಗ್ ಮಾಡಲಾಗಿದೆ. ನಾಯಕ-ನಾಯಕಿ ಸೇರಿ ಕೇವಲ ೧೨ ಮಂದಿ ತಂತ್ರಜ್ಞರೊಂದಿಗೆ ’ಸಲಗ’ದ ಈ ಹಾಡನ್ನು ೪ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಸೇನ ಈ ಹಾಡನ್ನು ಸುರಿಯವ ಭಾರಿ ಮಳೆಯಲ್ಲೇ ಚಿತ್ರೀಕರಿಸಿದ್ದಾರೆ.