ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆ-ಗಾಳಿಗೆ ಕುಸಿದ ಕೋಳಿ ಫಾರಂ: ಲಕ್ಷಾಂತರ ರೂ. ನಷ್ಟ

ಹಾಸನ: ಗುರುವಾರ ರಾತ್ರಿ ಸುರಿದ ಭಾರೀ ಮಳೆ,ಗಾಳಿಗೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಜಿಪಂ ವ್ಯಾಪ್ತಿಯ ಕಬ್ಬಿನಹಳ್ಳಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಿಮಿ೯ಸಲಾಗಿದ್ದ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗ್ರಾಮದ ನಿವಾಸಿ ಕೆ.ಎಲ್ ಚಂದ್ರಶೇಖರ್ ಎಂಬುವವರು ಸ್ವಂತ ಕೋಳಿ ಫಾರಂ ಘಟಕ ನಡೆಸುತ್ತಿದ್ದು, ಸುಮಾರು 5000 ಕೋಳಿ ಮರಿಗಳನ್ನು ಕಳೆದ 20 ದಿನಗಳ ಹಿಂದಷ್ಟೇ ಶೆಡ್ ನಲ್ಲಿ ಸಾಕಣೆ ಮಾಡುತ್ತಿದ್ದರು.
ಗುರುವಾರ ರಾತ್ರಿ ಭಾರಿ ಗಾಳಿ ಮಳೆ ಸುರಿದಿದ್ದು, ಈ ವೇಳೆ ಕೋಳಿ ಫಾರಂ ಕಟ್ಟಡ ಕುಸಿದಿದೆ.ಕುಸಿತದಿಂದ ಒಳಗಿದ್ದ ನೂರಾರು ಕೋಳಿಗಳು ಸಾವನ್ನಪ್ಪಿದ್ದು,ಅಂದಾಜು 12 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಲಕ್ಷಾಂತರ ರೂ.ಸಾಲ ಮಾಡಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ರೈತ ಚಂದ್ರಶೇಖರ್ ಅವರಿಗೆ ವರುಣ ಆಘಾತ ನೀಡಿದ್ದು ದಿಕ್ಕೆ ತೋಚದಂತಾಗಿದೆ.
ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ನೆರವಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss