ಮಳೆ ಮೋಡದ ನಡುವೆ ಕರಾವಳಿಯಲ್ಲಿ ಬಾನಂಗಳದ ವಿಸ್ಮಯ ಕಣ್ತುಂಬಿಕೊಂಡ ಖಗೋಳಪ್ರಿಯರು!

0
34

ಮಂಗಳೂರು/ಉಡುಪಿ: ಈ ವರ್ಷದ ಮೊದಲ ಸೂರ್ಯಗ್ರಹಣ ಇಂದು ನಡೆದಿದ್ದು, ಆಸ್ತಿಕರು ಪೂಜೆ ಹೋಮ ಹವನಗಳ ಮೊರೆಹೋದರೆ, ಖಗೋಳಪ್ರಿಯರು ಖಗೋಳ ವಿಸ್ಮಯ ಕಣ್ತುಂಬಿಕೊಂಡು ಖುಷಿಪಟ್ಟರು.
ಮೋಡ ಕವಿದ ವಾತಾವರಣ ಇದ್ದರೂ ಮಂಗಳೂರಿನ ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಸೂರ್ಯಗ್ರಹಣದ ವೀಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು. ಉಡುಪಿಯಲ್ಲಿ ವಿಜ್ಞಾನಿ ಆರ್ ಮನೋಹರ್ ಅವರು ದೂರದರ್ಶಕದ ಮೂಲಕ ಸೂರ್ಯಗ್ರಹಣವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಸಮಾಜ ಸೇವಕ ಗಣೇಶ್ ರಾಜ್ ಸರಳೆಬೆಟ್ಟು, ಸಾಮಾನ್ಯರಿಗೂ ಗ್ರಹಣ ವೀಕ್ಷಣೆ ಸಾಧ್ಯವಾಗುವಂತೆ ಸೌಲಭ್ಯ ಕಲ್ಪಿಸಿದರು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳಶಾಸ್ತ್ರಜ್ಞರ ಕ್ಲಬ್ ವತಿಯಿಂದ ಯೂಟ್ಯೂಬ್‌ ಮೂಲಕ ಸೂರ್ಯಗ್ರಹಣವನ್ನು ಆನ್‌ಲೈನ್‌ ಮೂಲಕ ವೀಕ್ಷಿಸಲು ನೇರಪ್ರಸಾರ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here