Saturday, August 13, 2022

Latest Posts

ಮಸೂದ್‌ ಅಜರ್‌ ಬಂಧನಕ್ಕೆ ಗಡುವು ಕೊಟ್ಟ ಪಾಕ್ ನ್ಯಾಯಾಲಯ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಮಸೂದ್ ಅಜರ್ ಬಂಧನಕ್ಕೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಗಡುವು ನೀಡಿದ್ದು , ಜನವರಿ 18 ರೊಳಗೆ ಪಂಜಾಬ್ ಪೊಲೀಸ್ ಭಯೋತ್ಪಾದನಾ ಇಲಾಖೆಗೆ ಸೂಚಿಸಿದೆ.
ಗುಜ್ರಾನ್‌ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ(ಎಟಿಸಿ) ತಕ್ಷಣವೇ ಮಸೂದ್‌ ಅಜರ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಕಳೆದ ಗುರುವಾರ ಬಂಧನ ವಾರಂಟ್ ಜಾರಿ ಮಾಡಿತ್ತು. ಆದರೆ ಇದುವರೆಗೂ ಬಂಧಿಸಿದ ಪೊಲೀಸರಿಗೆ ಈಗ ಜನವರಿ 18ರೊಳಗೆ ಬಂಧಿಸುವಂತೆ ನ್ಯಾಯಾಧೀಶ ನತಾಶಾ ನಸೀಮ್ ಸುಪ್ರಾ ಅವರು ಪಂಜಾಬ್ ಭಯೋತ್ಪಾದನೆ ನಿಗ್ರಹ ಪೊಲೀಸರಿಗೆ ಸೂಚಿಸಿದ್ದಾರೆ.
ಒಂದು ವೇಳೆ ಮಸೂದ್ ಅಜರ್ ನನ್ನು ಬಂಧಿಸಲು ವಿಫಲವಾದರೆ ನ್ಯಾಯಾಲಯವು ಆತನನ್ನು ಘೋಷಿತ ಅಪರಾಧಿ ಎಂದು ಘೋಷಿಸುತ್ತದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss