ಧಾರವಾಡ: ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ನಿವಾಸಿ ಹಾಗೂ ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಸಪ್ಪ ಫಕ್ಕೀರಪ್ಪ ಬೀರಣ್ಣವರ(85) ಗುರುವಾರ ವಿಧಿವಶರಾದರು.
ನಿರಂತರ ಹೋರಾಟ, ಅನಿರ್ಧಿಷ್ಟ ಧರಣಿ, ಉಪವಾಸ ಸತ್ಯಾಗ್ರಹ ಬಂದ್ ಸೇರಿದಂತೆ ರೈತಪರ ಹೋರಾಟದಲ್ಲಿ ಮುಂಚೂಣಿಗೆ ನಿಲ್ಲುತ್ತಿದ್ದ ಬಸಪ್ಪ ಅವರ ಅಗಲಿಕೆ ರೈತ ಸಮೂಹಕ್ಕೆ ಅಪಾರ ನೋವು ತಂದಿದೆ.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಅಪಾರ ಬಂದುಗಳು ಇದ್ದಾರೆ. ಮೃತರ ಅಂತ್ಯಕ್ರಿಯೆ ನವಲಗುಂದ ಹಿರೇಮಠದ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರೇಮಠ ಸಿದ್ದೇಶ್ವರ ಸ್ವಾಮೀಜಿ, ಗವಿಮಠ ಬಸವಲಿಂಗ ಸ್ವಾಮೀಜಿ, ನಾಗಲಿಂಗ ಮಠದ ವೀರಯ್ಯ ಸ್ವಾಮೀಜಿ, ಶಾಸಕ ಶಂಕರ ಪಾಟೀಲ್ ಮುನೇನಕೋಪ್ಪ, ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸಂತಾಪ ಸೂಚಿಸಿದ್ದಾರೆ.
ಯುವಕರಿಗೆ ಸ್ಫೂರ್ತಿ, ರೈತ ಹೋರಾಟ ಒಕ್ಕೂಟ ಮತ್ತು ಪಕ್ಷಾತೀತ ಹೋರಾಟ ಕೇಂದ್ರ ಸಮಿತಿ ನವಲಗುಂದ ಅಧ್ಯಕ್ಷರಾಗಿದ್ದ ಬೀರಣ್ಣವರ ಹೃದಯಾಘಾತದಿಂದ ನಿಧನರಾಗಿದ್ದು, ಹೋರಾಟದ ಕೊಂಡಿ ಕಳಿಚಿದಂತಾಗಿದೆ.