Saturday, August 13, 2022

Latest Posts

ಮಹದೇಶ್ವರನ ಭಕ್ತರ ಆಕ್ರೋಶಕ್ಕೆ ಬೆದರಿದ ಚಂದನ್ ಶೆಟ್ಟಿಯಿಂದ ಕ್ಷಮೆಯಾಚನೆ: ಯೂಟ್ಯೂಬ್‌ನಿಂದ ಡಿಲೀಟ್ ಆಯ್ತು ಕೋಲುಮಂಡೆ ಹಾಡು!

ಮೈಸೂರು: ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಇತಿಹಾಸ ಪ್ರಸಿದ್ಧ ಜಾನಪದ ನಾಯಕ, ಪವಾಡ ಪುರುಷ ಮಲೆಮಹದೇಶ್ವರನ ಭಕ್ತರ ಆಕ್ರೋಶಕ್ಕೆ ರ‍್ಯಾಪರ್ ಗಾಯಕ ಚಂದನ್‌ಶೆಟ್ಟಿ ಬೆದರಿ ಹೋಗಿದ್ದಾರೆ. ಇತ್ತೀಚೆಗೆ ಯೂಟ್ಯೂನ್‌ನಲ್ಲಿ ಬಿಡುಗಡೆ ಮಾಡಿದ್ದ ತಮ್ಮ ‘ಕೋಲುಮಂಡೆ’ ಎಂಬ ವಿಡಿಯೋ ಸಾಂಗ್‌ನಲ್ಲಿ ವಿವಾದದ ದೃಶ್ಯ ಚಿತ್ರೀಸಿರುವುದಕ್ಕಾಗಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಇದರ ನಡುವೆ ವಿವಾದ ಬಿಸಿ ತಾರಕ್ಕೇರುತ್ತಿದ್ದಂತೆ ಯೂಟ್ಯೂಬ್‌ನಿಂದಲೇ ಕೋಲು ಮಂಡೆ ಹಾಡನ್ನು ಇದೀಗ ಡಿಲೀಟ್ ಮಾಡಲಾಗಿದೆ.
ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಕೋಲುಮಂಡೆ ಹಾಡನ್ನು ರಿಲೀಸ್ ಮಾಡಿದ್ದರು. ಈ ಹಾಡು ಸಿಕ್ಕಾಪಟ್ಟೆ ವೀವ್ಸ್ ಪಡೆದುಕೊಂಡಿತ್ತು. ಮೂರೇ ದಿನಗಳಲ್ಲಿ ೩೦ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಇದು ಚಂದನ್ ಶೆಟ್ಟಿಗೆ ತೀವ್ರ ಖುಷಿಯನ್ನುಂಟು ಮಾಡಿತ್ತು. ಆದರೆ, ಅಷ್ಟೇ ಬೇಗನೆ ವಿವಾದದ ಬಿರುಗಾಳಿಯನ್ನು ಎಬ್ಬಿಸಿತು. ಈ ಹಾಡಿನಲ್ಲಿ ಇತಿಹಾಸ ತಿರುಚಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಚಾಮರಾಜನಗರದ ಮಲೆಮಹದೇಶ್ವರನ ಭಕ್ತರು ಹಾಗೂ ಸಾರ್ವಜನಿಕರು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಯೂಟ್ಯೂಬ್‌ನಿಂದ ಕೋಲುಮಂಡೆ ಹಾಡನ್ನು ತೆಗೆಯದಿದ್ದರೆ, ಚಂದನ್ ಶೆಟ್ಟಿ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಚಂದನ್ ಶೆಟ್ಟಿ ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದಾರೆ.
‘ಇದು ನಮ್ಮ ಅರಿವಿಗೆ ಬರದೇ ನಡೆದಿರುವ ಮಿಸ್ಟೇಕ್. ನಮ್ಮ ತಂಡದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಯಾವುದೇ ಧರ್ಮ, ಜಾತಿ, ಜನರಿಗೆ ಅವಮಾನ ಮಾಡಬೇಕು ಎಂದು ಹೀಗೆ ಮಾಡಿಲ್ಲ. ಈ ಹಾಡನ್ನು ಒಳ್ಳೆಯ ಉದ್ದೇಶದಿಂದ ಮಾಡಿದ್ದೇವೆ. ಚಿತ್ರೀಕರಣ ಮಾಡಿರುವುದರಲ್ಲಿ ತಪ್ಪಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ನಾನು ಕ್ಷಮೆ ಕೂಡ ಕೇಳುತ್ತೇನೆ. ಆದರೆ, ಸಾಹಿತ್ಯವನ್ನು ನಾನೆಲ್ಲಿಯೂ ತಿರುಚಿಲ್ಲ ಮತ್ತು ಟ್ಯೂನ್‌ಗೆ ಮ್ಯೂಸಿಕ್‌ನ ಮಿಕ್ಸ್ ಮಾಡಿದ್ದೇವೆ. ಜನಪದ ಗಾಯಕರನ್ನು ಇಟ್ಟುಕೊಂಡೇ ಈ ಹಾಡನ್ನು ರೆಕಾರ್ಡ್ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ನೀಲಯ್ಯ ಅವರು ಸಂಕಮ್ಮ ಅವರ ಮೇಲೆ ಅನುಮಾನ ಪಡುವುದನ್ನು ದ್ಯಶ್ಯದ ಮೂಲಕ ಹೇಳುವಾಗ ಕೊಂಚ ತಪ್ಪಾಗಿರಬಹುದು. ಈ ಬಗ್ಗೆ ಯಾರಿಗಾದರೂ ಬೇಜರಾಗಿದ್ದರೆ, ನಾವು ಕ್ಷಮೆ ಕೇಳುತ್ತಿದ್ದೇವೆ. ನಾವು ಒಂದೊಳ್ಳೆಯ ಉದ್ದೇಶದಿಂದ ಮಾಡುತ್ತಿದ್ದೇವೆ. ಈ ಹಾಡು ದೇಶ-ವಿದೇಶಗಳಲ್ಲಿ ಚೆನ್ನಾಗಿ ಓಡುತ್ತಿದೆ. ನಮಗೆ ಸಪೋರ್ಟ್ ಮಾಡಿ. ಚಾಮರಾಜನಗರದ ಜನರಿಗೆ, ಜನಪದ ಕಲಾವಿದರಿಗೆ ಮನವಿ ಮಾಡಿಕೊಳ್ಳುತ್ತೇನೆ. ಒಂದು ತಪ್ಪಾಗಿದೆ, ನಾನು ಕ್ಷಮೆಯಾಚಿಸುತ್ತೇನೆ. ನಿಮ್ಮ ಮನೆ ಮಗ ಎಂದುಕೊAಡು ಕ್ಷಮಿಸಿಬಿಡಿ. ಹಾಡಿನಲ್ಲಿ ಯಾವ ದೃಶ್ಯಗಳಿಗೆ ಆಕ್ಷೇಪ ವ್ಯಕ್ತವಾಗಿದೆಯೋ, ಅದನ್ನು ಬದಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss