Thursday, June 30, 2022

Latest Posts

ಮಹರ್ಷಿ ವಾಲ್ಮೀಕಿ, ಸರ್ದಾರ್ ವಲ್ಲಭಬಾಯಿ ಪಟೇಲರ ಜಯಂತಿಯ ಶುಭಾಶಯ ತಿಳಿಸಿ ಸಿಎಂ ಬಿಎಸ್’ವೈ

ಮಂಗಳೂರು:ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ರಾಷ್ಟ್ರೀಯ ಏಕತಾ ದಿನದ ಶುಭಕಾಮನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲರ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದು, ಆದಿಕಾವ್ಯ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹರ್ಷಿ ವಾಲ್ಮೀಕಿಗಳಿಗೆ ಅನಂತ ಪ್ರಣಾಮಗಳು. ಭಾರತೀಯ ಜನಮಾನಸದ ಮೇಲೆ ಶಾಶ್ವತ ಪ್ರಭಾವ ಬೀರಿರುವ ಮಹಾಕವಿ ವಾಲ್ಮೀಕಿಗಳನ್ನು ಪಡೆದ ಈ ನಾಡು ಧನ್ಯ ಎಂದು ಹೇಳಿದ್ದಾರೆ.

ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರ ’ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು, ರಾಷ್ಟ್ರದ ಏಕತೆಯ ಹರಿಕಾರನಿಗೆ ಅನಂತ ನಮನಗಳನ್ನು ಸಲ್ಲಿಸೋಣ. ಭಾರತದ ಅಖಂಡತೆಗಾಗಿ ಅಸಾಮಾನ್ಯ ಸಾಧನೆಗಳನ್ನು ಸಾಧಿಸಿದ ಪಟೇಲ್ ಅವರನ್ನು ದೇಶ ಎಂದಿಗೂ ಮರೆಯಲಾಗದು. ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss