ಮುಂಬೈ: ರಾಯಗಡ ಜಿಲ್ಲೆಯಲ್ಲಿ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕ್ಕಿದ್ದ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
60 ವರ್ಷದ ಮಹಿಳೆ ಮೆಹರುನ್ನಿಸಾ ಅಬ್ದುಲ್ ಹಮೀದ್ ಕಾಝಿ ಎನ್ನುವ ಮಹಿಳೆ ಕಳೆದ 26 ಗಂಟೆಯಿಂದಲೂ ಅವಶೇಷದಲ್ಲಿ ಸಿಲುಕಿದ್ದು,ಅವರನ್ನು ರಕ್ಷಿಸಲಾಗಿದೆ.
ಮಹಾಡ್ ನಗರದಲ್ಲಿ ನಡೆದ ಘಟನೆಯಲ್ಲಿ ಈಗಾಗಲೇ 13 ಮಂದಿ ಮೃತಪಟ್ಟಿದ್ದು, 12 ಮಂದಿಯ ಮೃತದೇಹ ಹೊರತೆಗೆಯಲಾಗಿದೆ. ಹಾಗೂ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಏಳು ವರ್ಷದ ಹಿಂದೆ ಕಟ್ಟಿದ್ದ ಈ ಕಟ್ಟಡದಲ್ಲಿ 45 ಮನೆಗಳಿದ್ದವು. ಕಟ್ಟಡದ ಗುತ್ತಿಗೆದಾರ ಹಾಗೂ ವಾಸ್ತುಶಿಲ್ಪಿ ವಿರುದ್ಧ ಪ್ರಕರಣ ದಾಖಲಾಗಿದೆ.