Tuesday, June 28, 2022

Latest Posts

ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡದಂತೆ ಝೀ ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ಜೀವನಾಧಾರಿತ ಕುರಿತು ಕನ್ನಡ ಝೀ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡದಂತೆ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆAದು ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಬುಧವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ನಿಂಗರಾಜ್ ಮಲ್ಲಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದಲ್ಲಿ ನೊಂದವರ, ಹಸಿದವರ, ಬೀದಿಯಲ್ಲಿ ಬಿದ್ದವರ ಆರಾಧ್ಯ ದೈವವಾಗಿದ್ದು, ಶತಶತಮಾನಗಳಿಂದ ಸಾಮಾಜಿಕ ಬಂಧನದಲ್ಲಿದ್ದು ಶೋಷಣೆಗೆ ಒಳಗಾಗುತ್ತ ಕತ್ತಲೆಯು ಬದುಕನ್ನು ಅನುಭವಿಸುತ್ತಿದ್ದ ಕೋಟ್ಯಂತರ ಜನರ ಮಹಾನ್ ನಾಯಕರಾಗಿದ್ದಾರೆ.

ನಮ್ಮ ಭಾರತ ದೇಶಕ್ಕೆ ಸಂವಿಧಾನವನ್ನು ರಚನೆ ಮಾಡಿ ಎಲ್ಲಾ ಜಾತಿಯ ಧರ್ಮದ ಭಾಷೆಯ ಜನರು ಸಮಾನತೆಯಿಂದ ಬದುಕುವ ಹಕ್ಕನ್ನು ಸಂವಿಧಾನಬದ್ಧವಾಗಿ ನೀಡಿದ್ದಾರೆ. ಇಂತಹ ಮಹಾನ್ ನಾಯಕರ ಜೀವನಾಧಾರಿತ ಧಾರವಾಹಿಯನ್ನು ಪ್ರಸಾರ ಮಾಡದಂತೆ ಕೆಲವು ಕಿಡಿಗೇಡಿಗಳು ಝೀ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ನಿರಂತರ ಬೆದರಿಕೆ ಕರೆಗಳನ್ನು ಹಾಕುತ್ತಿರುವುದು ತೀವ್ರ ಖಂಡನೀಯ ಎಂದರು.

ರಾಜ್ಯವ್ಯಾಪಿ ಅಂಬೇಡ್ಕರ್ ಅವರ `ಮಹಾನಾಯಕ’ ಧಾರವಾಹಿಯ ಭಾವಚಿತ್ರಗಳನ್ನು ಪ್ರತಿ ಹಳ್ಳಿಗಳಲ್ಲಿಯೂ ಅಭಿಮಾನಿಗಳು ಹಾಕಿದ್ದಾರೆ. ಕೆಲವು ಹಳ್ಳಿಗಳಲ್ಲಿ ದುಷ್ಟ ಜನರು ಪ್ಲೆಕ್ಸ್ ಗಳನ್ನು ಹರಿದು ಬೆಂಕಿ ಹಾಕುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಶನಿವಾರ, ಭಾನುವಾರ ಮಹಾನಾಯಕ ಧಾರವಾಹಿಯನ್ನು ಜನರು ನೋಡದಂತೆ ವಿದ್ಯುತ್ ನ್ನು ಕಡಿತಗೊಳಿಸುತ್ತಿದ್ದಾರೆ. ಇಂತಹ ಮನಸ್ಸಿನ ಜನರು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಗಲಭೆಯನ್ನು ಎಬ್ಬಿಸುವ ಪೂರ್ವಯೋಜಿತ ಗಲಾಟೆಗಳಿಗೆ ಕಾರಣರಾಗುತ್ತಿದ್ದಾರೆ ಇಂತಹ ಬೆದರಿಕೆಗಳಿಂದ ದಲಿತ ಸಮೂಹ ಎಂದಿಗೂ ಹೆದರುವುದಿಲ್ಲ.

ಬದಲಾಗಿ ದಲಿತರಲ್ಲಿ ಪ್ರಜ್ಞೆ ಬಂದಿದ್ದು ಅಂಬೇಡ್ಕರ್ ಅವರ ಸಿದ್ದಾಂತವನ್ನು ಪ್ರತಿಯೊಬ್ಬರೂ ಮನೆ ಮತ್ತು ಮನದಲ್ಲಿ ಅನುಸರಿಸುತ್ತ ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳುತ್ತಿದ್ದು, ರಾಘವೇಂದ್ರ ಹುಣಸೂರು ಇಂತಹ ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ. ನಿಮ್ಮ ಬೆಂಬಲಕ್ಕೆ ರಾಜ್ಯವ್ಯಾಪಿ ದಲಿತ ಸಮಾಜವು ನಿಂತಿದ್ದು ಮಹಾನಾಯಕ ಧಾರವಾಹಿಯನ್ನು ನಿರಂತರವಾಗಿ ಪ್ರಸಾರ ಮಾಡಬೇಕೆಂದರು.

ಸಿಎಂ ಬಿಎಸ್ ವೈ ರಾಘವೇಂದ್ರ ಹುಣಸೂರು ಅವರಿಗೆ ಸೂಕ್ತ ಪೊಲೀಸ್ ರಕ್ಷಣೆಯನ್ನು ನೀಡಬೇಕು. ಬೆದರಿಕೆ ಹಾಕುತ್ತಿರುವ ಮತ್ತು ಅಂಬೇಡ್ಕರ್ ಅವರ ಫ್ಲೆಕ್ಸ್ ಗಳನ್ನು ಹರಿದು ಹಾಕಿ ಬೆಂಕಿ ಹಚ್ಚುತ್ತಿರುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ತಪ್ಪಿದರೆ ಜಿಲ್ಲಾ ದಸಂಸ ಹೋರಾಟ ಮಾಡುವ ಅನಿವಾರ್ಯವಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಬಿ.ದಿವಾಕರ್, ದೇವೇಂದ್ರ, ಬಲ್ಲೇನಹಳ್ಳಿ ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss