Tuesday, July 5, 2022

Latest Posts

ಮಹಾಮಾರಿ ಕುರಿತು ಆರ್‌ಬಿಐ ಗವರ್ನರ್ ವ್ಯಾಖ್ಯೆ : ಕೋರೋನಾ ಅದೃಶ್ಯ ಹಂತಕಿ !

ಮುಂಬಯಿ: ಇಡೀ ಪ್ರಪಂಚವನ್ನು ನಡುಗಿಸಿದ ಕೋರೋನಾ ಒಂದು ಅದೃಶ್ಯ ಹಂತಕಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಣ್ಣಿಗೆ ಕಾಣದ ಕೋರೋನಾ ವೈರಸ್ ಪರಿಣಾಮದಿಂದ ಭಾರತವೂ ಸೇರಿದಂತೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ತತ್ತರಿಸುವಂತಾಗಿದೆ . ಇಂತಹ ಪರಿಸ್ಥಿತಿ ಪ್ರಪಂಚಕ್ಕೆ ಎಂದೂ ಒದಗಿರಲಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಲ್ಲದೆ, ಯೂರೋಪ್, ಏಷ್ಯಾ ಹಾಗೂ ಆಸ್ಟ್ರೇಲಿಯಾ ಖಂಡಗಳ ಬಹುತೇಕ ಕಡೆ ಕೋರೋನಾ ದಿನೇ ದಿನೇ ವಿಜೃಂಭಿಸುತ್ತಿದ್ದು, ದೇಶ , ವಿದೇಶದ ನಡುವಣ ವ್ಯಾಪಾರ ವಹಿವಾಟು ಹಾಗೂ ಖರೀದಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ದಿಶೆಯಲ್ಲಿ ಜಾಗತಿಕ ಮಟ್ಟದಲ್ಲಿ ರೂಪಾಯಿ ಬೆಲೆ ಕುಸಿಯಬಾರದು. ಅಲ್ಲದೆ ದ್ರವ್ಯ ವಿನಿಮಯವೂ ನಿರಂತರವಾಗಿರಿಸಲು ಆರ್‌ಬಿಐ ತನ್ನ ಎಲ್ಲ ಪ್ರಯತ್ನವನ್ನು ಮುಂದುವರಿಸಿದೆ. ಈಗಾಗಲೇ ಆರ್‌ಬಿಐ ರೆಪೋ ದರವನ್ನು ಪರಿಷ್ಕರಿಸಿದ್ದು ,ದೇಶದ ಜನತೆಗೆ ಅನುಕೂಲಕರವಾದ ಸಕಾರಾತ್ಮಕ ಕ್ರಮಗಳತ್ತ ಲಕ್ಷ್ಯ ವಹಿಸಿದೆ ಎಂದು ದಾಸ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss