Wednesday, August 17, 2022

Latest Posts

ಮಹಾರಾಷ್ಟ್ರದಲ್ಲಿ ನವೆಂಬರ್ 5ರಿಂದ ಸಿನಿಮಾ ಮಂದಿರ ಓಪನ್

ಮುಂಬೈ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಬಂದ್ ಆಗಿದ್ದ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳಗಳು, ಯೋಗ ತರಗತಿಗಳು ಪುನರಾರಂಭಕ್ಕೆ ಮಹಾರಾಷ್ಟ್ರ ಸರ್ಕಾರ ಬುಧವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ನವೆಂಬರ್ 5ರಿಂದ ಚಿತ್ರಮಂದಿರಗಳು ತೆರೆಯಲಿವೆ. ಚಿತ್ರಮಂದಿರಗಳನ್ನು ತೆರೆಯಬಹುದು ಆದರೆ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ಎಂದು ಹೇಳಲಾಗಿದೆ. ಆದರೆ ಯಾವುದೇ ಆಹಾರ ಪದಾರ್ಥಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರದ ನೂತನ ನಿಯಮಾವಳಿ ಪ್ರಕಾರ, ಈಜುಕೊಳಗಳನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧಿಗಳಿಗೆ ತರಬೇತಿ ನೀಡಲು ಉಪಯೋಗಿಸಬೇಕು. ನವೆಂಬರ್ 5ರಿಂದ ಬ್ಯಾಡ್ಮಿಂಟನ್ ಹಾಲ್ಸ್, ಟೆನ್ನಿಸ್ ಕೋರ್ಟ್ಸ್, ಒಳಾಂಗಣ ಶೂಟಿಂಗ್ ತರಬೇತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ
ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಹೋಟೆಲು, ಬಾರ್ ಆಯಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿತ್ತು. ದೈಹಿಕ ಅಂತರ ಮತ್ತು ಸ್ಯಾನಿಟೈಜೇಶನ್ ಕಡ್ಡಾಯವಾಗಿ ಪಾಲಿಸಬೇಕು ಎಂಬ ಷರತ್ತಿನೊಂದಿಗೆ ಹೋಟೆಲು, ಬಾರ್ ತೆರೆಯಲು ಅವಕಾಶ ನೀಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!