ಹೊಸದಿಗಂತ ಆನ್ಲೈನ್ ಡೆಸ್ಕ್
ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದೆ.
ಬುಧವಾರ ರಾತ್ರಿ 8 ರಿಂದ ಮುಂದಿನ 15 ದಿನಗಳವರೆಗೆ ಸೆಕ್ಷನ್ 144 ಅನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಆದೇಶ ನೀಡಿದೆ.
ಆದರೆ ಈ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ತುರ್ತು ಸೇವೆಗಳು ತೆರೆದಿರುತ್ತವೆ ಎಂದು ಠಾಕ್ರೆ ಹೇಳಿದ್ದಾರೆ.
ವಿಡಿಯೋ ಭಾಷಣದಲ್ಲಿ ಮಾತನಾಡಿರುವ ಠಾಕ್ರೆ, ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು ವೈದ್ಯಕೀಯ ಆಮ್ಲಜನಕ, ಹಾಸಿಗೆಗಳ ಕೊರತೆ ಇದೆ ಮತ್ತು ರೆಮ್ಡೆಸಿವಿರ್ನ ಬೇಡಿಕೆಯೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಭದ್ರತಾ ಬೆದರಿಕೆ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸುವ ಕ್ರಿಮಿನಲ್ ಪ್ರೊಸೀಜರ್ (ಸಿಆರ್ಪಿಸಿ) ಯ ಸೆಕ್ಷನ್ 144 ಅನ್ನು ಹೊರಡಿಸಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗಳಾದ ಬಸ್ಸುಗಳು ಮತ್ತು ರೈಲುಗಳು ತುರ್ತು ಸೇವೆಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಪೆಟ್ರೋಲ್ ಪಂಪ್ಗಳು, ಸೆಬಿಗೆ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಮತ್ತು ನಿರ್ಮಾಣ ಕಾರ್ಯಗಳು ಮುಂದುವರಿಯುತ್ತವೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಮಾತ್ರ ಮುಚ್ಚುತ್ತವೆ. ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಲಾಗಿದೆ.
ಕೊರೋನಾ ಎರಡನೇ ಅಲೆ ಮಹಾರಾಷ್ಟ್ರವನ್ನು ಹೈರಾಣಾಗಿಸಿದ್ದು ಈಗಾಗಲೇ ದೈನಂದಿನ ರಾತ್ರಿ ಕರ್ಫ್ಯೂಗಳ ಹೊರತಾಗಿ ವಾರಾಂತ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ.