ಮಹಾರಾಷ್ಟ್ರದಲ್ಲಿ 9310 ಕೊರೋನಾ ಸೋಂಕಿತರು: 400 ಮಂದಿ ಬಲಿ

0
86

ಮುಂಬೈ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9318ಕ್ಕೆ ಏರಿಕೆಯಾಗಿದ್ದು, ಮಂಗಳವಾರ ಒಂದೇ ದಿನ 729 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೋನಾಗೆ ನೆನ್ನೆ 31 ಮಂದಿ ಬಲಿಯಾಗಿದ್ದು, 106 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ 400 ಮಂದಿ ಕೊರೋನಾ ಸೋಂಕಿನಿಂದ ಬಲಿಯಾಗಿದ್ದು, 1388 ಮಂದಿ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕಿಗೆ 29,974 ಮಂದಿ ಸೋಂಕಿತರು ದಾಖಲಾಗಿದ್ದಾರೆ. ಕೋವಿಡ್-19 ಸೋಂಕಿಗೆ ಈಗಾಗಲೇ 937ಮಂದಿ ಬಲಿಯಾಗಿದ್ದು, 7,027 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕಿಗೆ 20ಮಂದಿ ಸಾವನ್ನಪ್ಪಿದ್ದು, 520 ಮಂದಿ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿ ಕೊರೋನಾಗೆ 198 ಮಂದಿ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here