ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ 14 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, ಮಹಾರಾಷ್ಟ್ರದಿಂದ ಆಗಮಿಸಿ ಪಾಸಿಟಿವ್ ಆದವರ ಸಂಪರ್ಕದಿಂದ ಭಾನುವಾರ ಮೂವರಿಗೆ ಸೋಂಕು ಹರಡಿರುವುದು ಜಿಲ್ಲೆಯ ಜನತೆಯಲ್ಲಿ ಭೀತಿ ಸೃಷ್ಟಿಸಿದೆ.
ಮೇ ೮ರಂದು ಮುಂಬೈನಿಂದ ಆಗಮಿಸಿ ಕೆಂಜಾರು ತಾಂಗಡಿ ಪ್ರದೇಶದಲ್ಲಿ ವಾಸವಿದ್ದ ವೇಳೆ ಪಾಸಿಟಿವ್ ಆಗಿದ್ದ ೪೬ ವರ್ಷದ ಪುರುಷನಿಂದ (ರೋಗಿ ಸಂಖ್ಯೆ ೨೨೮೭) ಒಂದೇ ಕುಟುಂಬದ ಮೂವರಿಗೆ ಸೋಂಕು ಹರಡಿರುವುದು ಭಾನುವಾರ ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಪದ ರೋಗಿ ಸಂಖ್ಯೆ ೨೨೮೭ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ೧೭ ವರ್ಷದ ಬಾಲಕ, ೩೧ ಮತ್ತು ೫೨ ವರ್ಷದ ಪುರುಷನಿಗೆ ಕೊರೋನಾ ಕಾಣಿಸಿಕೊಂಡಿದೆ. ಜತೆಗೆ ಕತಾರ್ನಿಂದ ಮೇ ೨೨ರಂದು ಆಗಮಿಸಿದ ೫೦ ವರ್ಷದ ಪುರುಷ, ಮಲೇಷಿಯಾದಿಂದ ಮೇ ೨೨ರಂದು ಆಗಮಿಸಿದ ೩೮ ವರ್ಷದ ಪುರುಷ, ಮುಂಬೈನಿಂದ ಜತೆಯಾಗಿ ಮೇ ೧೮ರಂದು ಆಗಮಿಸಿದ ೨೨, ೫೨, ೫೦ ವರ್ಷದ ಪುರುಷರು, ಮಹಾರಾಷ್ಟ್ರದಿಂದ ಮೇ ೧೮ರಂದು ಆಗಮಿಸಿದ ಒಂದೇ ಕುಟುಂಬದ ೪೪ ಮತ್ತು ೩೦ ವರ್ಷದ ಪುರುಷ, ಮುಂಬೈನಿಂದ ಮೇ ೨೦ರಂದು ಜತೆಯಾಗಿ ಆಗಮಿಸಿದ ೪೫ ಮತ್ತು ೪೩ ವರ್ಷದ ಮಹಿಳೆ. ಮುಂಬೈನಿಂದ ಮೇ ೧೮ರಂದು ಆಗಮಿಸಿದ ೪೦ ವರ್ಷದ ಪುರುಷ ಮತ್ತು ೩೮ ವರ್ಷದ ಮಹಿಳೆಗೆ ಕೊರೋನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶನಿವಾರ ೧೪ ಪ್ರಕರಣ ಕಾಣಿಸಿಕೊಂಡಿದ್ದು, ಭಾನುವಾರ ಅಷ್ಟೇ ಸಂಖ್ಯೆಯ ಜನರಿಗೆ ಕೋವಿಡ್ ವೈರಸ್ ವಕ್ಕರಿಸಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೩೩ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದವರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜಿಲ್ಲೆಗೆ ಮಹಾ ಕಂಟಕ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಮಹಾರಾಷ್ಟ್ರದಿಂದ ಆಗಮಿಸಿ ಪಾಸಿಟಿವ್ ಆದವರ ಸಂಪರ್ಕದಿಂದ ಸೋಂಕು ಹರಡುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಈಗ ಭೀತಿ ಮೂಡಿಸಿದೆ.