ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಾರಾಷ್ಟ್ರದಿಂದ ಕೃಷ್ಣಾ-ಭೀಮೆಗೆ ಅಧಿಕ ಪ್ರಮಾಣದ ನೀರು ಬಿಡುಗಡೆ: NDFR ತಂಡದಿಂದ ರೋಜಾ ಗ್ರಾಮದ 50 ಜನರ ರಕ್ಷಣೆ

ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ನದಿಯ ಅಚ್ಚುಕಟ್ಟು ಪ್ರದೇಶ ಗಾಮಗಳಲ್ಲಿ ಪ್ರವಾಹ ಎದರಿಸುತ್ತಿದ್ದು ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನ 50 ಕಿ.ಮೀ ದೂರದ ಮಹಾರಾಚ್ಟ್ರದ ಜಲಾಶಯದಿಂದ ಶನಿವಾರ ಬೆಳಿಗ್ಗೆ ಸುಮಾರು 4.15 ಲಕ್ಷ ಕ್ಯೂಸೆಕ ನೀರು ನದಿಗೆ ಹರಿಬಿಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾ ಎದರಿಸುವಂತಾಗಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಹೊಸೂರ ಗ್ರಾಮ ಸುತ್ತಲೂ ಭೀಮಾ ನದಿ ಸುತ್ತುವರೆದ ಪರಿಣಾಮ ರೋಜಾ ಗ್ರಾಮ ನಡುಗಡ್ಡೆಯಾಗಿದೆ, ಸುಮಾರು 50 ಜನರು ಆ ಗ್ರಾಮದಲ್ಲಿ ಸಿಲುಕಿದ್ದು, NDRF ತಂಡ ಪೊಲೀಸರ ಸಹಕಾರದೊಂದಿಗೆ ಈಗಾಗಲೇ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನುಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ
ಪ್ರವಾಹದ ಸಂಕಷ್ಟದಿಂದ ಜನತೆಯನ್ನು ರಕ್ಷಿಸಲು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದ ಜನರನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ತರಲಾಗುತ್ತಿದೆ. ಹೊಸೂರ ಶಾಲೆಯೊಂದರಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಅಣಬಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಮೋಟಗಿ ತಿಳಿಸಿದ್ದಾರೆ.
ರಾತ್ರಿಯಿಂದಲೇ ಬೀಡು ಬಿಟ್ಟಿದ್ದ ಪಿಡಿಓ ಅವರು, ಪೊಲೀಸ್ ಸಿಬ್ಬಂದಿ ಮತ್ತು, ಕಾರ್ಯಾಚರಣೆ ತಂಡ ಸೇರಿದಂತೆ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಹೊಸೂರ ಗ್ರಾಮದಲ್ಲಿ ಯೇ ತಂಗಿದ್ದು, NDRF ತಂಡಕ್ಕೆ ಬೇಕಾದ ಸಹಕಾರ ನೀಡುತ್ತಿದ್ದು, ರೊಜಾ ಗ್ರಾಮದಲ್ಲಿ ಇನ್ನುಳಿದ ಜನರನ್ನು ಕರೆ ತರುವ ಕಾರ್ಯ ಮುಂದುವರೆದಿದೆ. ಈ ರೀತಿಯಾದ ನೆರೆ ಇದೇ ಮೊದಲು ಬಾರಿ ಈ ಪರಿಯಲ್ಲಿ ಉಂಟಾಗಿದೆ ಎನ್ನುತ್ತಾರೆ ಹೊಸೂರ ಗ್ರಾಮದ ಮುಖಂಡ ಗುರುಲಿಂಗಪ್ಪ ಹೊಸೂರ.
ಕೃಷ್ಣಾ ನದಿಗೂ ಬಸವಸಾಗರದಿಂದ 1.96 ಲಕ್ಷ ಕ್ಯೂಸೆಕ ನೀರು : ಆಲಿಮಟ್ಟಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡುತ್ತಿದ್ದರಿಂದ ಬಸವಸಾಗರ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ ನೀರು ಹರಿದುಬರುತ್ತಿದೆ. ಕಾರಣ ಜಲಾಶಯದಿಂದ 1.96 ಲಕ್ಷ ಕ್ಯೂಸೆಕ ನೀರನ್ನು ಕೃಷ್ಣಾ ನದಿಗೆ 18 ಗೇಟುಗಳ ಮೂಲಕ ನದಿಗೆ ಬಡಿಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಎರಡು ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹದ ಭೀತಿಯನ್ನು ಹುಟ್ಟಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss